ವ್ಯಕ್ತಿತ್ವ ನಿರ್ಮಾಣಕ್ಕೆ ಜವಾಬ್ದಾರಿ ಪೂರಕ, ನಲಂದ ಶಾಲೆ ಸಂಚಾಲಕ ಡಾ.ಕೆ.ಮೋಹನ್ ಪೈ ಅಭಿಮತ

nalanda
ನಲಂದ ಶಾಲಾ ಸಂಸತ್ತಿನ ಪದಗ್ರಹಣ ಕಾರ್ಯಕ್ರಮದಲ್ಲಿ ಶಾಲೆ ಸಂಚಾಲಕ ಡಾ.ಕೆ.ಮೋಹನ್ ಪೈ, ಮುಖ್ಯಶಿಕ್ಷಕಿ ಸವಿತಾ ಎನ್.ಕಾಮತ್ ಮೊದಲಾದವರು ಭಾಗವಹಿಸಿದ್ದರು.
Published on

ಮಂಗಳೂರು: ನಲಂದ ಆಂಗ್ಲ ಮಾಧ್ಯಮ ಶಾಲೆಯ 2023-24ನೇ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತಿನ ಪದಗ್ರಹಣ ಕಾರ್ಯಕ್ರಮ ಶಾಲೆ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಶಾಲೆ ಸಂಚಾಲಕ ಡಾ.ಕೆ.ಮೋಹನ್ ಪೈ ಮಾತನಾಡಿ, ನಾಯಕತ್ವ ಎನ್ನುವುದು ಜವಾಬ್ದಾರಿಯೇ ಹೊರತು ಅಧಿಕಾರವಲ್ಲ. ಶಿಕ್ಷಣ ವಿದ್ಯಾರ್ಥಿಗಳಿಗೆ ಅಡಿಪಾಯ ಇದ್ದಂತೆ. ವಿದ್ಯಾರ್ಥಿ ಹಂತದಲ್ಲಿ ನಿಭಾಯಿಸುವ ಜವಾಬ್ದಾರಿ ಮುಂದಿನ ದಿನಗಳಲ್ಲಿ ವ್ಯಕ್ತಿತ್ವ ನಿರ್ಮಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಮುಖ್ಯಶಿಕ್ಷಕಿ ಸವಿತಾ ಎನ್.ಕಾಮತ್ ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರತಿನಿಧಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net