ಸರ್ಕಾರದ ಯೋಜನೆಗಳ ರಕ್ಷಣೆ ಜವಾಬ್ದಾರಿ

hbr-2
Published on

ಹೆಬ್ರಿ: ಸರ್ಕಾರದ ಯೋಜನೆಗಳು ಕಾರ್ಯಗತಗೊಂಡಾಗ ಸಾರ್ವಜನಿಕರು ಪ್ರಯೋಜನ ಪಡೆದು, ರಕ್ಷಿಸುವ ಜವಾಬ್ದಾರಿ ಕೂಡ ನಮ್ಮದಾಗಿದೆ. ಸಾವಿರಾರು ಮಂದಿ ರೈತರು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇದರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಮಹತ್ವ ನೀಡಿದೆ ಎಂದು ಉಡುಪಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಹೇಳಿದರು.

ಚಾರ ನವೋದಯದ ಬಳಿ 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಸಹಿತ ಕಿಂಡಿ ಅಣೆಕಟ್ಟಿಗೆ ಸೋಮವಾರ ಬಾಗಿನ ಸಮರ್ಪಿಸಿ ಮಾತನಾಡಿದರು.

ಹೆಬ್ರಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಂಕರ್ ಶೇರಿಗಾರ್, ಪ್ರಮುಖರಾದ ಪ್ರವೀಣ್ ಬಲ್ಲಾಳ್, ಗೋಪಿನಾಥ್ ಭಟ್, ದಿನೇಶ್ ಕುಮಾರ್ ಶೆಟ್ಟಿ, ಕಿರಣ್ ತೋಳಾರ್, ಭೂತುಗುಂಡಿ ಕರುಣಾಕರ ಶೆಟ್ಟಿ, ಮಹೇಶ್ ಶೆಟ್ಟಿ ಬಾದ್ಲು, ಮಹೇಶ್ ಶೆಟ್ಟಿ ಕಾನ್ಬೆಟ್, ಎಚ್.ಜನಾರ್ದನ್, ಸನತ್ ಕುಮಾರ್ ಶೆಟ್ಟಿ, ಮಿಥುನ್ ಶೆಟ್ಟಿ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net