ಬಿ&ಖಾತಾ ಅಭಿಯಾನಕ್ಕೆ ಸ್ಪಂದನೆ

25 05 2025_BNG_RURAL_PAGE_5
ನೆಲಮಂಗಲ ನಗರಸಭೆಯಲ್ಲಿ ಆರಂಭವಾದ ಬಿ&ಖಾತಾ ಅಭಿಯಾನದಲ್ಲಿ ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದರು. ಉಪಾಧ್ಯಕ್ಷ ಜಿ.ಆನಂದ್​, ಸದಸ್ಯ ಗಂಗಾಧರ್​ರಾವ್​, ಪೌರಾಯುಕ್ತ ಎಚ್​.ಎಂ.ಮನುಕುಮಾರ್​ ಇತರರು ಇದ್ದರು.
Published on

ನೆಲಮಂಗಲ : ಅನಧಿಕೃತ ನಿವೇಶನ, ಮನೆಗಳಿಗೆ ಬಿ&ಖಾತೆ ಕೊಡುವ ನಿಟ್ಟಿನಲ್ಲಿ ಸರ್ಕಾರ ನಡೆಸಿದ ಅಭಿಯಾನದಲ್ಲಿ ನೆಲಮಂಗಲ ನಗರಸಭೆಯಿಂದ ಅತಿಹೆಚ್ಚು ಸಂಖ್ಯೆಯ ಬಿ&ಖಾತಾ ನೀಡಿರುವ ಮಾಹಿತಿ ಲಭ್ಯವಾಗಿದೆ.

ನಗರ, ಪಟ್ಟಣ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಅನಧಿಕೃತ ನಿವೇಶನಗಳು, ಮನೆಗಳ ಮಾಲೀಕರಿಗೆ ಮೂರು ತಿಂಗಳ ಹಿಂದೆ ಸಿಹಿಸುದ್ದಿ ನೀಡಿದ್ದ ರಾಜ್ಯ ಸರ್ಕಾರ ಒಂದೇ ಬಾರಿಗೆ ಇ&ಖಾತಾಗೆ ಸಮಾನಂತರವಾದ ಬಿ&ಖಾತಾ ನೀಡುವ ಉದ್ದೇಶದಿಂದ ನಗರಾಭಿವೃದ್ಧಿ ಇಲಾಖೆ ಕೆಲ ನಿಯಮ ತಿದ್ದುಪಡಿ ಮಾಡಿದೆ. ನಗರ ಪಟ್ಟಣ ಸ್ಥಳಿಯ ಸಂಸ್ಥೆಗಳಿಗೆ 3 ತಿಂಗಳ ಗಡುವು ನೀಡಿ ಆದೇಶ ಹೊರಡಿಸಿತ್ತು.

ಮೇ 10ವರೆಗೆ ಇದ್ದ 3 ತಿಂಗಳ ಅಭಿಯಾನದ ಗಡುವು ಮುಂದಿನ (ಆಗಸ್ಟ್​ 10) 3 ತಿಂಗಳವರೆಗೂ ವಿಸ್ತರಣೆ ಮಾಡಿದ್ದು, ಅವಕಾಶ ವಂಚಿತ ಅನಧಿಕೃತ ಮನೆ, ನಿವೇಶನ ಮಾಲೀಕರು ಪ್ರಯೋಜನ ಪಡೆದುಕೊಳ್ಳಬೇಕಾಗಿದೆ. 3 ತಿಂಗಳ ಕಾಲ ನಡೆಸಿದ ಬಿ&ಖಾತಾ ಅಭಿಯಾನದಲ್ಲಿ 5,158 ಸಂಖ್ಯೆ ಅನಧಿಕೃತ ಆಸ್ತಿಗಳಿಗೆ ಬಿ&ಖಾತಾ ನೀಡಿದ್ದರೆ, ಅಧಿಕೃತ 12,016 ಎ&ಖಾತೆ ಸೇರಿ ಒಟ್ಟು 17,174 ಖಾತೆ ವಿತರಣೆ ಮಾಡಿದ್ದು, ಅನಧಿಕೃತ ಆಸ್ತಿ ಮಾಲೀಕರಿಗೆ ನಿರಾಳ ತಂದಿದೆ. ನಗರಸಭೆ ವ್ಯಾಪ್ತಿಯಲ್ಲಿ ಕಂದಾಯ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿರುವುದು ಒಂದೆಡೆಯಾದರೆ, 2019ರಲ್ಲಿ ಪುರಸಭೆ, ನಗರಸಭೆಗೆ ಮೇಲ್ದರ್ಜೆಗೇರಿದ ಬಳಿಕ ವಿಲೀನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ವಸತಿ ಬಡಾವಣೆಗಳು ಅನಧಿಕೃತವಾಗಿವೆ.

ಗ್ರಾಮೀಣಾಭಿವೃದ್ಧಿ ಪಂಚಾಯತ್​ ರಾಜ್​ ಇಲಾಖೆಯಿಂದ (ಕ್ರಮಬದ್ದವಲ್ಲದ) ಆಸ್ತಿಗಳೆಂದು ನಮೂದಿಸಿ ನಮೂನೆ 11 ಬಿ ಹೆಸರಿನಲ್ಲಿ ಇ&ಖಾತಾ ನೀಡಿತ್ತು. ಇನ್ನೂ ಕೆಲ ವಸತಿ ಬಡಾವಣೆಗಳಲ್ಲಿ ನಿವೇಶನ ಖರೀದಿಸಿದ್ದ ಕೆಲವರು ಇ&ಸ್ವತ್ತು ಪಡೆಯದೇ ಕೈಬರಹ ಖಾತಾ ಇಟ್ಟುಕೊಂಡಿದ್ದರು. ಇದೀಗ ಸರ್ಕಾರ ನಡೆಸಿದ ಅಭಿಯಾನದಲ್ಲಿ ಎಲ್ಲರೂ ಬಿ&ಖಾತಾ ಪಡೆದುಕೊಂಡಿದ್ದು ಪರಬಾರೆ, ಬ್ಯಾಂಕುಗಳಲ್ಲಿ ಸಾಲಸೌಲಭ್ಯ ಪಡೆಯಲು ಸಹಕಾರಿಯಾಗಿದೆ.

ಜನಪ್ರತಿನಿಧಿಗಳಿಗೆ ಹೆಸರು ತಂದ ಕಾರ್ಯಕ್ರಮ : ಬಿ&ಖಾತಾ ಅಭಿಯಾನಕ್ಕೆ ಚಾಲನೆ ನೀಡಿದ ೇತ್ರದ ಶಾಸಕರು, ಅಧಿಕಾರಿಗಳು, ಸಿಬ್ಬಂದಿಗೆ ಪ್ರಗತಿಯಲ್ಲಿ ಜನಸಾಮಾನ್ಯರಿಗೆ ಅಭಿಯಾನದ ಪ್ರಯೋಜನ ದೊರಕಿಸಿಕೊಡುವಂತೆ ತಾಕೀತು ಮಾಡಿದ್ದಲ್ಲದೇ ಮಾಲೀಕರಿಂದ ಯಾವುದೇ ಹಣ ಪಡೆಯದಂತೆ ತಾಕೀತು ಮಾಡಿದ್ದರು. ನಗರಸಭೆಯ ಸದಸ್ಯರು ವಾರ್ಡ್​ನ ನಿವಾಸಿಗಳಿಗೆ ಬಿ&ಖಾತಾ ಮಾಡಿಸಿಕೊಟ್ಟು ಪ್ರಶಂಸೆಗೆ ಪಾತ್ರರಾದರು.

ಹರಿದು ಬಂದ ತೆರಿಗೆ : ಅನಧಿಕೃತ ನಿವೇಶನ ಹೊಂದಿದ್ದ ಮಾಲೀಕರಿಂದ 2024&25 ಸಾಲಿಗೆ ದುಪ್ಪಟ್ಟು ತೆರಿಗೆ (ಡಬಲ್​ ಟ್ಯಾಕ್ಸ್​) ಪಾವತಿಸಿಕೊಂಡು ಬಿ&ಖಾತಾ ನೀಡಿ ನಗರ, ಪಟ್ಟಣ, ಸ್ಥಳಿಯ ಸಂಸ್ಥೆಗಳ ಖಜಾನೆಗೆ ಕೋಟ್ಯಂತರ ರೂ. ತೆರಿಗೆ ರೂಪದಲ್ಲಿ ಸಂಗ್ರಹವಾಗಿದ್ದು, ಅಭಿವೃದ್ಧಿ ಕೆಲಸಗಳಿಗೆ ಸಹಕಾರಿಯಾಗಲಿದೆ.

ಸರ್ಕಾರದ ನಿರ್ದೇಶನ, ಶಾಸಕರು ಹಾಗೂ ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ ವ್ಯವಸ್ಥಿತವಾಗಿ ಯೋಜನೆ ಮಾಡಿಕೊಂಡಿದ್ದರ ಫಲವಾಗಿ ಅತಿಹೆಚ್ಚು ಮಂದಿ ಅಭಿಯಾನದ ಪ್ರಯೋಜನ ಪಡೆಯಲು ಸಾಧ್ಯವಾಗಿದೆ. ಶೇ.70 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಉಳಿದ ಅರ್ಜಿಗಳನ್ನು ಶ್ರೀದಲ್ಲಿ ವಿಲೇವಾರಿ ಮಾಡಲಾಗುವುದು. | ಎಚ್​.ಎಂ.ಮನುಕುಮಾರ್​ ಪೌರಾಯುಕ್ತ ಮಗಳ ಮದುವೆಗಾಗಿ ದುಡಿದು ಕೂಡಿಟ್ಟ ಸ್ವಲ್ಪ ಹಣ, ಬ್ಯಾಂಕಿನಿಂದ ಸಾಲ ಪಡೆದು ನಿವೇಶನ ಖರೀದಿ ಮಾಡಲಾಗಿತ್ತು. ಈಗ ಅನಧಿಕೃತ ಸ್ವತ್ತುಗಳ ಪರಭಾರೆ ನಿಲ್ಲಿಸಿದ್ದರಿಂದ ಬಾರಿ ಚಿಂತೆಯಾಗಿತ್ತು. ಅನಧಿಕೃತ ನಿವೇಶನಗಳ ಬಿ&ಖಾತಾ ವಿತರಣೆ ಜತೆಗೆ ಪರಭಾರೆಗೂ ಅವಕಾಶ ಕಲ್ಪಿಸಿದ್ದರಿಂದ ನಿಟ್ಟುಸಿರು ಬಿಡುವಂತಾಗಿದೆ. | ಹನುಮಂತಪ್ಪ ಟ್ರಕ್​ ಡ್ರೆವರ್​ ನೆಲಮಂಗಲ ಇ&ಸ್ವತ್ತು ಇಲ್ಲದ ಕಾರಣ ಪರಭಾರೆ, ಸಾಲಸೌಲಭ್ಯ ಪಡೆಯಲು ಬಾರಿ ತೊಂದರೆಯಾಗಿತ್ತು. ಸರ್ಕಾರ ಜಾರಿಗೊಳಿಸಿದ ಅಭಿಯಾನದಿಂದ ಮಧ್ಯಮ ಹಾಗೂ ಬಡಜನರಿಗೆ ಬಾರಿ ಅನುಕೂಲವಾಗಿದೆ. ಜಿಲ್ಲೆಯಲ್ಲಿ ಅತಿಹೆಚ್ಚು ಸಂಖ್ಯೆಯ ಬಿ&ಖಾತಾ ವಿತರಣೆ ಮಾಡಿದ್ದು ಎಲ್ಲದರ ಕ್ರೆಡಿಟ್​ ನಗರಸಭೆ ಅಧಿಕಾರಿ, ಸಿಬ್ಬಂದಿಗೆ ಸಲ್ಲುತ್ತದೆ. | ಎನ್​.ಗಣೇಶ್​ ನಗರಸಭೆ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net