

ಚಿಕ್ಕಮಗಳೂರು: ಬಡವರು, ದೀನ ದಲಿತರ ನೋವಿಗೆ ಸ್ಪಂದಿಸುವುದು, ಮಾನವ ಹಕ್ಕುಗಳು ಹಾಗೂ ಅಕ್ರಮ ಭೂ ಒತ್ತುವರಿ ವಿರುದ್ಧ ನಿರಂತರ ಹೋರಾಟ ರೂಪಿಸಿ ನ್ಯಾಯ ಒದಗಿಸಲು ಹೋರಾಟ ನಡೆಸಿದವರು ಭೀಮ್ ಆರ್ಮಿ ಮುಖಂಡರು ಎಂದು ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಆರ್.ಅನಿಲ್‌ಕುಮಾರ್ ತಿಳಿಸಿದರು.
ನಗರದ ಜಿಲ್ಲಾ ಭೀಮ್ ಆರ್ಮಿ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆ ಪ್ರತಿ ಗ್ರಾಮಗಳ ಮೂಲೆ ಮೂಲೆಗಳಿಗೆ ಮುಟ್ಟಿಸುವ ಕಾರ್ಯವನ್ನು ಮುಖಂಡರು ಮಾಡಬೇಕಿದೆ. ಭೀಮ್‌ಆರ್ಮಿ ಶಕ್ತಿಯು ರಾಜಕೀಯ ಪಕ್ಷಗಳನ್ನು ತಲ್ಲಣಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದರು.
ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಆದರ್ಶ ಹಾಗೂ ವಿಚಾರಗಳನ್ನು ಇಂದಿನ ಯುವಪೀಳಿಗೆ ಮೈಗೂಡಿಸಿಕೊಳ್ಳಬೇಕು. ಅನ್ಯಾಯ ಅಥವಾ ತುಳಿತಕ್ಕಾಳದ ನೊಂದ ಕುಟುಂಬಗಳಿಗೆ ಸಂಘಟನೆ ಮುಖಾಂತರ ನ್ಯಾಯ ಒದಗಿಸುವ ಕಾರ್ಯ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಭೀಮ್‌ಆರ್ಮಿ ಗೌರವಾಧ್ಯಕ್ಷ ಹೊನ್ನೇಶ್ ಮಾತನಾಡಿ, ಈಗಾಗಲೇ ಸಂಘಟನೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಸದಸ್ಯರು ಇದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿಯಾಗುತ್ತಿದೆ. ಸಂಘಟನೆ ಉz್ದೆÃಶ ಅಂಬೇಡ್ಕರ್ ಅವರ ಸಂವಿಧಾನ ನೀತಿ, ನಿಯಮಗಳನ್ನು ಎಲ್ಲೆಡೆ ಪಸರಿಸುವುದು ಹಾಗೂ ನ್ಯಾಯ ಸಮ್ಮತ ಹೋರಾಟಕ್ಕೆ ಸೀಮಿತವಾಗಿದೆ ಎಂದರು.
ದಲಿತ ಮುಖಂಡ ಹುಣಸೇಮಕ್ಕಿ ಲಕ್ಷö್ಮಣ್ ಮಾತನಾಡಿ, ಅಂಬೇಡ್ಕರ್ ಸಂವಿಧಾನ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ, ಪ್ರತಿ ಜನಾಂಗಕ್ಕೂ ಪೂರಕವಾಗಿದೆ. ಇತ್ತೀಚೆಗೆ ಸಂವಿಧಾನ ಅಪಾಯದಲ್ಲಿರುವ ಕಾರಣ ಇಂದಿನ ಯುವಪೀಳಿಗೆ ಎಚ್ಚೆತ್ತುಕೊಳ್ಳಬೇಕು. ಸಮಾಜದಲ್ಲಿ ಸಂವಿಧಾನದ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಬೇಕು ಎಂದರು.
ಈ ಸಂದರ್ಭದಲ್ಲಿ ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಗಿರೀಶ್, ಸಾಮಾಜಿಕ ಜಾಲತಾಣದ ಮುಖ್ಯಸ್ಥ ದಿಲೀಪ್, ಪ್ರಧಾನ ಕಾರ್ಯದರ್ಶಿ ಲೋಕೇಶ್, ಸದಸ್ಯರಾದ ರಾಕೇಶ್, ಪ್ರಸನ್ನ, ಕುಮಾರ್, ಚೌಡಪ್ಪ, ಪ್ರದೀಪ್, ರಮೇಶ್, ಪ್ರವೀಣ್, ಮನು, ಸುಧೀರ್ ಮತ್ತಿತರರಿದ್ದರು.