ರೈತರ ಸಂಕಷ್ಟಕ್ಕೆ ಸ್ಪಂದಿಸುವೆ

Responding to the plight of farmers
ವಿಜಯಪುರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಡಾ. ವಿಲಿಯಂ ರಾಜಶೇಖರ ಅವರನ್ನು ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ, ಪಾಟೀಲ ಟ್ರೇಡರ್ಸ್ ಮಾಲೀಕ ವಿಜಯಕುಮಾರ ಪಾಟೀಲ, ಕೃಷಿ ಪಂಡಿತ ಪುರಸ್ಕೃತ ಸಿದ್ದಪ್ಪ ಬೂಸಗೊಂಡ ಸನ್ಮಾನಿಸಿದರು.
Published on

ವಿಜಯಪುರ: ಜಿಲ್ಲೆಯಲ್ಲಿ ಹವಾಮಾನ ಬದಲಾವಣೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಕೃಷಿ ಇಲಾಖೆಯಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವುದಾಗಿ ಜಂಟಿ ಕೃಷಿ ನಿರ್ದೇಶಕ ಡಾ. ವಿಲಿಯಂ ರಾಜಶೇಖರ ಹೇಳಿದರು.

ಶುಕ್ರವಾರ ಜಂಟಿ ಕೃಷಿ ಇಲಾಖೆಯಲ್ಲಿ ವಿವಿಧ ವ್ಯಾಪಾರಸ್ಥರು ಸನ್ಮಾನಿಸಿದ ನಂತರ ಮಾತನಾಡಿದ ಅವರು, ಈಗಾಗಲೇ ಒಂದು ಬಾರಿ ಜಂಟಿ ಕೃಷಿ ಇಲಾಖೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದು, ಜಿಲ್ಲೆಯ ರೈತರ ಸಮಸ್ಯೆಗಳ ಅರಿವಿದೆ.

ಅವರ ಸಂಕಷ್ಟಗಳಿಗೆ ಸ್ಪಂದಿಸುವ ಜವಾಬ್ದಾರಿ ತಮ್ಮ ಮೇಲಿದೆ ಎಂದರು.

ಬೆಳೆ ವಿಮೆ ಪರಿಹಾರ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ರೈತರಿಗೆ ನೆರವು, ತೊಗರಿ ಬೆಳೆಯಲ್ಲಿ ನಾಟಿ ಪದ್ಧತಿ, ಜಲಾನಯನ ಇಲಾಖೆಯಿಂದ ರೈತರ ಹೊಲಗಳಲ್ಲಿ ಕೃಷಿ ಹೊಂಡ, ಚೆಕ್ ಡ್ಯಾಂ, ರೈತರಿಗೆ ಇಲಾಖೆಯಿಂದ ದೊರೆಯುವ ಉತ್ತಮ ಗುಣಮಟ್ಟದ ಪರಿಕರಗಳನ್ನು ರಿಯಾಯಿತಿ ದರದಲ್ಲಿ ಪೂರೈಕೆ ಸೇರಿದಂತೆ ರೈತರಿಗೆ ದೊರೆಯುವ ವಿವಿಧ ಯೋಜನೆಗಳ ಅನುಷ್ಠಾನವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ.

ಇದರಿಂದಾಗಿ ನಾನು ಮತ್ತೊಮ್ಮೆ ಜಿಲ್ಲೆಯ ರೈತರಿಗೆ ಸೇವೆ ಸಲ್ಲಿಸುವ ಸದಾವಕಾಶ ಒದಗಿ ಬಂದಿದೆ ಎಂದರು.

ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ, ಪಾಟೀಲ ಟ್ರೇಡರ್ಸ್ ಮಾಲೀಕ ವಿಜಯಕುಮಾರ ಪಾಟೀಲ, ಕೃಷಿ ಪಂಡಿತ ಪುರಸ್ಕೃತ ಸಿದ್ದಪ್ಪ ಬೂಸಗೊಂಡ ಸೇರಿದಂತೆ ಇಲಾಖೆ ಅಧಿಕಾರಿಗಳು, ಕೃಷಿ ಪರಿಕರ ಮಾರಾಟ ಪ್ರತಿನಿಧಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net