ಬಡಾವಣೆಯ ಸಮಸ್ಯೆಗಳಿಗೆ ಸ್ಪಂದಿಸುವೆ

h11-sirur park
Published on

ಹುಬ್ಬಳ್ಳಿ: ಇಲ್ಲಿನ ಶಿರೂರ ಪಾರ್ಕ್ ಎರಡು ಹಾಗೂ ಮೂರನೆಯ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಸೋಮವಾರ ಬಡಾವಣೆಯ ಸಾಧಕರಿಗೆ ಸನ್ಮಾನ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಡಾವಣೆಯ ಸಾಧಕರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ಉತ್ತಮ ಸಂಪ್ರದಾಯ. ಇದು ಯುವಕರ ಮೇಲೆ ಪರಿಣಾಮ ಬೀರಿ ಸಾಧನೆಯ ಮೆಟ್ಟಿಲು ಹತ್ತಲು ಸಹಕಾರಿಯಾಗಲಿದೆ. ಬಡಾವಣೆಯ ಸಮಸ್ಯೆಗಳಿಗೆ ಸ್ಪಂದಿಸುವೆ. ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಉಳಿಸಿ, ಬೆಳೆಸಬೇಕು ಎಂದು ಸಲಹೆ ನೀಡಿದರು.

ಮೇಯರ್ ವೀಣಾ ಬರದ್ವಾಡ ಮಾತನಾಡಿ, ಸಾಧಕರನ್ನು ಯುವಕರು ಆದರ್ಶವಾಗಿಟ್ಟುಕೊಳ್ಳಬೇಕು. ಈ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಕೇವಲ ಮೊಬೈಲ್​ಫೋನ್, ಟಿವಿಗೆ ಅಂಟಿಕೊಳ್ಳಬಾರದು ಎಂದು ತಿಳಿವಳಿಕೆ ನೀಡಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಿ.ಎಂ. ಗುರುಮೂರ್ತಿ, ಡಾ. ಲಿಂಗರಾಜ ಹೊರಕೇರಿ, ಸುಭಾಷ ಹಂಗರಕಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎಸ್.ಎಸ್. ಹಂಗರಕಿ ಅಧ್ಯಕ್ಷತೆ ವಹಿಸಿದ್ದರು.

ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಪಾಲಿಕೆ ಮಾಜಿ ಸದಸ್ಯ ಮಹೇಶ ಬುರ್ಲಿ, ಡಾ. ದೇವರಾಜ ರಾಯಚೂರ, ಪ್ರಮುಖರಾದ ಶೈಲೇಶ ಹೊನ್ನಳ್ಳಿ, ಮಹಾದೇವ ಕರಮರಿ, ಬಸವರಾಜ ಅಂಗಡಿ, ಡಾ.ಎಚ್.ವಿ. ಬೆಳಗಲಿ, ಡಾ. ರಾಮೂ ಮೂಲಗಿ, ಜಿ.ವಿ. ಹಿರೇಮಠ, ಎನ್.ಎಸ್. ಯತ್ನಳ್ಲಿ, ವಿ.ಎಸ್. ವಿಭೂತಿ, ಡಾ. ಮಹೇಶ ಹೊರಕೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net