

ಕುಂದಗೋಳ: ಜನ ಸಾಮಾನ್ಯರ ಆಶೋತ್ತರಗಳಿಗೆ ದನಿಯಾಗಿ ಕಾರ್ಯ ನಿರ್ವಹಿಸಲು ಹಾಗೂ ಜನತೆಯ ಅಹವಾಲು ಸ್ವೀಕರಿಸಿ, ಪರಿಹಾರ ಒದಗಿಸಲು ಜನ ಸಂಪರ್ಕ ಕೇಂದ್ರ ತೆರೆಯಲಾಗಿದೆ ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.
ಪಟ್ಟಣದ ವಿವಿಧ ಇಲಾಖೆಗಳ ಸರ್ಕಾರಿ ಕಚೇರಿ ಸಂಕೀರ್ಣದಲ್ಲಿ ಕಲ್ಯಾಣಪುರದ ಶ್ರೀ ಅಭಿನವ ಬಸವಣ್ಣಜ್ಜನವರು ಹಾಗೂ ಶಿವಾನಂದ ಮಠದ ಶ್ರೀ ಮಹಾಂತಶಿವಯೋಗಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜನ ಸಂಪರ್ಕ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮತಕ್ಷೇತ್ರದ ಜನರು ಈ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ರೋಟರಿ ಕ್ಲಬ್ ವತಿಯಿಂದ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಜಾಗೃತಿ ಶಿಬಿರದಲ್ಲಿ ಭಾಗವಹಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರದ ಸಾಧನೆಯ ಕರಪತ್ರ ಹಂಚಿಕೆ ಹಾಗೂ ಮನೆ ಮನೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರವಿಗೌಡ ಪಾಟೀಲ, ಮಾಲತೇಶ ಶ್ಯಾಗೋಟಿ, ಶೇಖಣ್ಣ ಬಾಳಿಕಾಯಿ, ದಾನಪ್ಪ ಗಂಗಾಯಿ, ಗಣೇಶ ಕೊಕಾಟೆ, ವಾಗೀಶ ಗಂಗಾಯಿ, ಹನುಮಂತಪ್ಪ ರಣತೂರ, ಹನುಮಂತಪ್ಪ ಮೇಲಿನಮನಿ, ಶ್ಯಾಮಸುಂದರ ದೇಸಾಯಿ, ನಾಗನಗೌಡ ಸಾತ್ಮಾರ, ಬಸನಗೌಡ ಕರೆಹೊಳಲ್ಲಪ್ಪನವರ, ರಾಘವೇಂದ್ರಗೌಡ ಪಾಟೀಲ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.