

ಕೋಲಾರ: ನಗರಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳ ಗೋಳು ಕೇಳುವವರೆ ಇಲ್ಲದಂತಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆಡಳಿತಾಧಿಕಾರಿ ಇದ್ದ ಅವಧಿಯಲ್ಲಿ ಸಕಾಲಕ್ಕೆ ಜನರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿರಲಿಲ್ಲ ಎಂಬ ಆರೋಪವಿತ್ತು. ಅಧಿಕಾರಿ, ಸಿಬ್ಬಂದಿ ಕಚೇರಿಯಲ್ಲಿ ಲಭ್ಯವಾಗುತ್ತಿರಲಿಲ್ಲ. ಈ ವಿಚಾರವು ನಗರಸಭೆ ಸದಸ್ಯರ, ಸಾರ್ವಜನಿಕರ ಆಕ್ರೋಶಕ್ಕೆ ಕಾಣವಾಗಿತ್ತು.
ಆನಂತರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ನಡೆದು ಅಧ್ಯಕ್ಷರಾಗಿ ಲಕ್ಷಿ$್ಮದೇವಮ್ಮ, ಉಪಾಧ್ಯಕ್ಷರಾಗಿ ಸಂಗೀತಾ ಆಯ್ಕೆಯಾಗಿದ್ದು, ಚುನಾಯಿತ ಮಂಡಳಿ ರಚನೆಯಾದ ನಂತರವೂ ಜನರ ಸಮಸ್ಯೆಗಳಿಗೆ ಸಕಾಲಕ್ಕೆ ಸ್ಪಂದನೆ ದೊರೆಯುತ್ತದೆ ಎಂಬ ನಿರೀೆಯಿತ್ತು. ಆದರೂ ಸಹ ಸಕಾಲಕ್ಕೆ ಸೌಲಭ್ಯ ದೊರೆಯದೆ ಇರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 35 ವಾರ್ಡ್ಗಳಿದ್ದು, ಕುಡಿಯುವ ನೀರು, ಬೀದಿದೀಪ, ರಸ್ತೆ, ಯುಜಿಡಿ ಹೀಗೆ ಹಲವು ಸಮಸ್ಯೆಗಳನ್ನು ಎತ್ತಿಕೊಂಡು ಕಚೇರಿ ಬರುವವರಿದ್ದಾರೆ. ಸಾಮಾನ್ಯ ಮೂಲ ಸೌಲಭ್ಯಗಳ ಸಮಸ್ಯೆ ಎದುರಾದರೆ ಕೂಡಲೇ ಬಗೆಹರಿಸಲು ಹೆಲ್ಪ್ಲೈನ್ ಸ್ಥಾಪನೆ ಮಾಡಲಾಗಿದ್ದು, ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬತಾಗಿದೆ. ಜತೆಗೆ ಖಾತೆ ಬದಲಾವಣೆ, ಪೌತಿ ಖಾತೆ, ಇ&ಆಸ್ತಿ, ದಾಖಲೆ ತಿದ್ದುಪಡಿ, ಜನನ, ಮರಣ ಪತ್ರ, ಟ್ರೇಡ್ ಪರವಾನಗಿ, ಮನೆ ನಿರ್ಮಾಣಕ್ಕೆ ಅನುಮತಿ ಪತ್ರ ಹೀಗೆ ಹಲವು ಕೆಲಸಗಳಿಗಾಗಿ ಜನ ನಗರಸಭೆಗೆ ಬರುತ್ತಾರೆ.
ನಗರದಲ್ಲಿನ ಎಂಜಿ ರಸ್ತೆ, ಕೋಲಾರ ನಗರದಿಂದ ಬಂಗಾರಪೇಟೆ, ಶ್ರೀನಿವಾಸಪುರ, ಮಾಲೂರು, ಚಿಕ್ಕಬಳ್ಳಾಪುರ, ಟೇಕಲ್ಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ನಗರ ವ್ಯಾಪ್ತಿಯಲ್ಲಿ ಸುಸಜ್ಜಿತವಾಗಿವೆ. ಇನ್ನು ಬಡಾವಣೆಗಳಲ್ಲಿನ ಮುಖ್ಯರಸ್ತೆಗಳು, ಸಂಪರ್ಕ ರಸ್ತೆಗಳು ಹಾನಿಯಾಗಿದ್ದು, ಅದನ್ನು ಅಭಿವೃದ್ಧಿಪಡಿಸುವ ಗೋಜಿಗೆ ನಗರಸಭೆ ಹೋಗದೆ ಇರುವುದು ವಿಷಾದಕರ ಸಂಗತಿಯಾಗಿದೆ.
ಬೇಸಿಗೆ ಆರಂಭವಾಗಿದ್ದು ಕೊಳವೆಬಾವಿಗಳಲ್ಲಿ ನೀರು ಪಾತಾಳಕ್ಕೆ ಹೋಗಿದ್ದು, ಇದರಿಂದಾಗಿ ಮನೆಗಳಿಗೆ ನೀರು ಸಬರಾಜು ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಸ್ಯೆಯು ತೀವ್ರಗೊಳ್ಳದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂಬುದು ನಗರವಾಸಿಗಳ ಒತ್ತಾಯವಾಗಿದೆ.
ನಗರಸಭೆ ಪೌರಾಯುಕ್ತ ಪ್ರಸಾದ್ ಎರಡು ಇಲಾಖೆಯಲ್ಲಿ ಜವಾಬ್ದಾರಿ ಹೊಂದಿದ್ದು, ಸಕಾಲಕ್ಕೆ ಕಚೇರಿಗೆ ಆಗಮಿಸುವುದಿಲ್ಲ. ಜತೆಗೆ ಅಧ್ಯೆ ಲಕ್ಷಿ$್ಮದೇವಮ್ಮ, ಉಪಾಧ್ಯೆ ಸಂಗೀತಾ ಸಹ ಕಚೇರಿಯಲ್ಲಿ ಲಭ್ಯವಾಗುವುದಿಲ್ಲ ಎಂದು ಕೆಲ ಸದಸ್ಯರ ಆರೋಪವಾಗಿದೆ.
ಇಂಜಿನಿಯರ್ಗಳ ಉದಾಸೀನ
ನೀರಿನ ಸಮಸ್ಯೆ ಉಲ್ಬಣಿಸುತ್ತಿದ್ದು, ಈ ಬಗ್ಗೆ ಇಂಜನಿಯರ್ಗಳ ಗಮನಕ್ಕೆ ತರಲು ಸದಸ್ಯರು, ಸಾರ್ವಜನಿಕರು ಕಚೇರಿಗೆ ಬಂದರೆ ಯಾರೂ ಸಿಗುವುದಿಲ್ಲ. ದೂರವಾಣಿ ಕರೆ ಮಾಡಿದರೆ ಸ್ಥಳ ಪರಿಶೀಲನೆಯಲ್ಲಿದ್ದೇವೆ ಎಂದು ಸಬೂಬು ಹೇಳುತ್ತಾರೆ. ಸಮಸ್ಯೆ ಕುರಿತು ಇಂಜನಿಯರ್ಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ವಿದ್ಯುತ್ ವ್ಯತ್ಯಾಸದಿಂದ ಕೊಳವೆಬಾವಿಯ ಪ್ಯಾನಲ್ ಬೋರ್ಡ್ ಅಥವಾ ಪಂಪು ಮೋಟಾರ್ ಸುಟ್ಟು ಹೋದರೆ ಸಕಾಲಕ್ಕೆ ರಿಪೇರಿ ಮಾಡಿಸಿ, ಜನಕ್ಕೆ ನೀರು ಒದಗಿಸುವ ಗೋಜಿಗೆ ಅಧಿಕಾರಿಗಳು ಹೋಗುವುದಿಲ್ಲ ಎಂದು ಸದಸ್ಯರು ದೂರಿದ್ದಾರೆ.
ಆಟಕ್ಕುಂಟು ಲೆಕ್ಕಕ್ಕಿಲ್ಲ
ಸಮಸ್ಯೆ ನಿವಾರಣೆಗಾಗಿ ನಗರಸಭೆಗೆ ದೂರು ನೀಡಲು, ಪ್ರತ್ಯೇಕ ಹೆಲ್ಪ್ಲೈನ್ ಸ್ಥಾಪನೆ ಮಾಡಿದ್ದು, ಅದಕ್ಕೆ ಓರ್ವ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿದೆ. ಆದರೆ ಇಲ್ಲಿಗೆ ಸಮಸ್ಯೆ ಹೇಳಿಕೊಳ್ಳಲು ದೂರವಾಣಿ ಕರೆ ಮಾಡಿದರೆ ಸ್ಪೀಕರಿಸುವವರೇ ಇರುವುದಿಲ್ಲ. ಇದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.
ಜನರನ್ನು ಕಾಯಿಸುವುದು ಕೆಲವರ ವಾಡಿಕೆ
ಕಂದಾಯ ವಿಭಾಗ, ಇಂಜಿನಿಯರ್ ವಿಭಾಗ, ಪರಿಸರ ಮತ್ತು ಆರೋಗ್ಯ ವಿಭಾಗಗಳಿದ್ದು, ಸಿಬ್ಬಂದಿ ಕುಳಿತುಕೊಳ್ಳಲು ಬಹು ಬೆಲೆ ಬಾಳುವ ಕುರ್ಚಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸಮಸ್ಯೆ ಎತ್ತಿಕೊಂಡು ವಯಸ್ಕರು, ವೃದ್ದರು ಕಚೇರಿಗಳಿಗೆ ಆಗಮಿಸುತ್ತಾರೆ. ಅವರಿಗೆ ಕುರ್ಚಿ ವ್ಯವಸ್ಥೆ ಮಾಡಿಲ್ಲ. ಸೌಜನ್ಯದಿಂದ ಮಾತನಾಡಿಸಿಯೂ ಕಳುಹಿಸುವುದಿಲ್ಲ. ನಿಮಿಷಗಳ ಗಟ್ಟಲೇ ನಿಲ್ಲಿಸಿ ಕಾಯಿಸುವುದು ಕೆಲ ಸಿಬ್ಬಂದಿಯ ವಾಡಿಕೆಯಾಗಿದೆ.
ಲೋಕಾ ದಳಿಗೂ ಎಚ್ಚೆತ್ತುಕೊಳ್ಳದ ನಗರಸಭೆ
ನಗರಸಭೆಯ ಅವ್ಯವಸ್ಥೆಯ ಬಗ್ಗೆ ಲೋಕಾಯುಕ್ತರಿಗೆ ಸಲ್ಲಿಕೆಯಾಗಿದ್ದ ದೂರುಗಳ ಹಿನ್ನಲೆಯಲ್ಲಿ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಅಧಿಕಾರಿಗಳೊಂದಿಗೆ ದಿಢೀರ್ ದಾಳಿ ನಡೆಸಿದ್ದರು. ಆಗ ವ್ಯವಸ್ಥೆ ಸರಿಪಡಿಸಿಕೊಳ್ಳುವಂತೆ ತಾಕೀತು ಮಾಡಿದ್ದರು. ಆದರೂ ಸಹ ನಗರಸಭೆಯ ವ್ಯವಸ್ಥೆಯೂ ಸರಿ ಹೋಗಿಲ್ಲ. ಲೋಕಾಯುಕ್ತರು ಬಿಸಿ ಮುಟ್ಟಿಸಿದ್ದರೂ ಕೆಲ ಅಧಿಕಾರಿಗಳು, ಸಿಬ್ಬಂದಿ ಎಚ್ಚೆತ್ತುಕೊಂಡಿಲ್ಲ.
ನಗರಸಭೆ ವ್ಯವಸ್ಥೆ ಸರಿ ಹೋಗಬೇಕಾದರೆ ಒಂದು ಕ್ರಾಂತಿ ಆಗಬೇಕಾಗಿದೆ. ಅಧಿಕಾರಿ, ಸಿಬ್ಬಂದಿಗೆ ಮಾನವೀಯತೆ ಕೊರತೆಯಿದ್ದು, ಜನರನ್ನು ಅಲೆದಾಡಿಸುವುದನ್ನು ನಿಲ್ಲಿಸಿಲ್ಲ. ವ್ಯವಸ್ಥೆಯ ಬಗ್ಗೆ ಪ್ರಶ್ನೆ ಮಾಡಿದರೆ ಇನ್ನೊಂದು ರೀತಿ ಅರ್ಥ ಮಾಡಿಕೊಳ್ಳುತ್ತಾರೆ.
- ಎಸ್.ಆರ್.ಮುರಳಿಗೌಡ, ನಗರಸಭೆ ಸದಸ್ಯ, ಕೋಲಾರ
ಸಾರ್ವಜನಿಕರು ನಗರಸಭೆಗೆ ಅರ್ಜಿ ಸಲ್ಲಿಸಲಿದರೆ ಸಕಾಲಕ್ಕೆ ವಿಲೇವಾರಿ ಆಗುವುದಿಲ್ಲ. ಶಿಾರಸು, ರಾಜಕೀಯ ಹಿನ್ನಲೆಯಿದ್ದರೆ ಮಾತ್ರ ಕೆಲಸ ಬೇಗ ಆಗುತ್ತದೆ.
- ರಾಜೇಶ್ ಸಿಂಗ್, ಕೋಲಾರ