

ವಿಜಯಪುರ : ಉತ್ತರ ಕರ್ನಾಟಕ ಭಾಗದ ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸತತ ಮಳೆಯಿಂದ ದ್ರಾ ಬೆಳೆಗಳು ರೋಗಕ್ಕೆ ತುತ್ತಾಗುತ್ತಿವೆ. ರೋಗಕ್ಕೆ ತುತ್ತಾದ ಬೆಳೆ ಪ್ರದೇಶಗಳಿಗೆ ನುರಿತ ತರಿಂದ ಭೇಟಿ ನೀಡಿ ಮಾರ್ಗದರ್ಶನ ನೀಡುವ ಕುರಿತು ಸರ್ಕಾರದ ಗಮನ ಸೆಳೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರಿಗೆ ದ್ರಾ ಬೆಳೆಗಾರರ ಸಂದ ಅಧ್ಯ ಡಾ. ಕೆ.ಎಚ್. ಮುಂಬಾರೆಡ್ಡಿ ಪತ್ರದ ಬರೆದು ಮನವಿ ಸಲ್ಲಿಸಿದ್ದಾರೆ.
ಅತಿವೃಷ್ಟಿಯಿಂದ ದ್ರಾ ಬೆಳೆಗಳು ಪೂರ್ವ ಪ್ರಮಾಣದಲ್ಲಿ ಗರ್ಭಧಾರಣೆ ಆಗದೆ ರೋಗಗಳಿಗೆ ತುತ್ತಾಗುತ್ತಿವೆ. ಅದರಿಂದ ದ್ರಾ ಉತ್ಪಾದನೆ ಕುಂಠಿತಗೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ರೈತರು ಕೂಡ ಆತಂಕಗೊಂಡಿದ್ದಾರೆ. ಅಲ್ಲದೆ, ನಾಲ್ಕೆದು ವರ್ಷಗಳಿಂದ ದ್ರಾಗೆ ಸೂಕ್ತ ದರ ದೊರಕದೆ ರೈತರು ಸಾಲದ ಸುಳಿಗೆ ಸಿಲುಕಿ, ತಮ್ಮ ದ್ರಾ ತೋಟಗಳನ್ನು ತೆರವುಗೊಳಿಸುತ್ತಿದ್ದಾರೆ. ಅದರಿಂದ ಉತ್ಪಾದನೆ ಪ್ರಮಾಣ ಕುಂಠಿತವಾಗಿದೆ. ಶೇ. 40 ರಷ್ಟು ಮಾತ್ರ ದ್ರಾ ಬೆಳೆಯಲಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಕಳೆದ 2024&25 ನೇ ಸಾಲಿನ ದ್ರಾ ಬೆಳೆ ವಿಮಾ ಕಂತಿನ ಹಣ ಇನ್ನೂ ಬಿಡುಗಡೆಯಾಗಿಲ್ಲ. ಅದು ಕೂಡ ರೈತರಲ್ಲಿ ದ್ರಾ ಬೆಳೆಯಿಂದ ನಮಗೆ ನಷ್ಟವೇ ಹೊರತು ಲಾಭ ಇಲ್ಲವೆಂದು ಶಪಿಸುವಂತಾಗಿದೆ. ಹೀಗಾಗಿ ಜೆಲ್ಲೆಯ ರೈತರ ಪರವಾಗಿ ಸಚಿವ ಎಂ.ಬಿ. ಪಾಟೀಲರು ಸರ್ಕಾರದ ಗಮನ ಸೆಳೆದು ದ್ರಾ ಬೆಳೆಗಾರರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕಿಸಿಕೊಂಡುವಂತೆ ಪತ್ರದಲ್ಲಿ ವಿನಂತಿಸಲಾಗಿದೆ ಎಂದು ಸಂದ ಅಧ್ಯ ಡಾ. ಕೆ.ಎಚ್. ಮುಂಬಾರೆಡ್ಡಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ