

ಲೋಕಾಪುರ : ಸತತ ಮಳೆಯಿಂದ ಕಟಾವಿಗೆ ಬಂದಿದ್ದ ಈರುಳ್ಳಿ ಬೆಳೆ ನಷ್ಟವಾಗಿ ರೈತರು ಸಂಕಷ್ಟದಲ್ಲಿದ್ದು ಅವರಿಗೆ ಸೂಕ್ತ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂದ ಜಿಲ್ಲಾಧ್ಯ ಲೋಕಣ್ಣ ಉಳ್ಳಾಗಡ್ಡಿ ಆಗ್ರಹಿಸಿದ್ದಾರೆ.ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಂದು ಲ ಎಕರೆಯಲ್ಲಿ ಈರುಳ್ಳಿ ಬೆಳೆದಿರುವ ರೈತರ ಜಮೀನುಗಳಲ್ಲಿ ನೀರು ಮಡುಗಟ್ಟಿ ನಿಂತಿದ್ದು, ಬೆಳೆ ಸಂಪೂರ್ಣ ನಾಶವಾಗಿದೆ. ಅದರಲ್ಲೂ ಲೋಕಾಪುರ ಸುತ್ತಲಿನ ಗ್ರಾಮಗಳ ಅಧಿಕ ರೈತರಿಗೆ ಈರುಳ್ಳಿ ಬೆಳೆಯೇ ಆಧಾರವಾಗಿದೆ. ಬೆಳೆ ನಷ್ಟವಾಗಿ ಬದುಕು ಕಷ್ಟಕರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆಂಧ್ರ ಪ್ರದೇಶ ಸರ್ಕಾರ ಈರುಳ್ಳಿ ಬೆಳೆದ ರೈತರಿಗೆ ಒಂದು ಹೆಕ್ಟೇರ್ ಪ್ರದೇಶಕ್ಕೆ 50 ಸಾವಿರ ರೂ. ಪರಿಹಾರವನ್ನು ಈಗಾಗಲೇ ೂಷಣೆ ಮಾಡಿದೆ ಅಲ್ಲದೇ ಕ್ವಿಂಟಾಲ್ಗೆ 1200 ರೂ. ಗಳಂತೆ ಬೆಂಬಲ ಬೆಲೆಯೊಂದಿಗೆ ಖರೀದಿ ಕೇಂದ್ರವನ್ನೂ ತೆರೆದಿದೆ. ಅದೇ ರೀತಿ ನಮ್ಮ ರಾಜ್ಯದಲ್ಲಿಯೂ ಸರಾಸರಿ ಕ್ವಿಂಟಾಲ್ಗೆ 2000 ರೂ. ಗಳಂತೆ ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದಲ್ಲಿ ಖರೀದಿ ಕೇಂದ್ರ ತೆರೆಯಬೇಕೆಂದು ಒತ್ತಾಯಿಸಿದರು.
ಲೋಕಣ್ಣ ಉಳ್ಳಾಗಡ್ಡಿ