ಸಕಾಲದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ

5Huk3
Published on

ಹುಕ್ಕೇರಿ: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಸಕಾಲದಲ್ಲಿ ಕೆಲಸ ಮಾಡಿ ಕೊಡಬೇಕು. ರಸ್ತೆ, ಕುಡಿಯುವ ನೀರು, ಚರಂಡಿ ನಿರ್ಮಾಣ, ಬೀದಿ ದೀಪ ಸೇರಿ ವಿವಿಧ ಸಮಸ್ಯೆ ಶೀಘ್ರ ಪರಿಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿ, ಸ್ಥಳೀಯ ವಿದ್ಯುತ್ ಸಹಕಾರಿ ಸಂಘದಲ್ಲಿ ನಿರ್ಮಾಣವಾಗುವ ಸಿಮೆಂಟ್ ಕಂಬಗಳ ತಯಾರಿಕೆ ಹೆಚ್ಚಿಸಲು ಪ್ರಯತ್ನಿಸಬೇಕು. ಇದರಿಂದ ಗ್ರಾಹಕರಿಗೆ ನಿಗದಿತ ಸಮಯದೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅನುಕೂಲವಾಗಲಿದೆ ಎಂದು ಹೇಳಿದರು.

ಸರ್ವೇ ಮಾಡಲು ಬರುತ್ತಿಲ್ಲ: ತಾಲೂಕು ಭೂಮಾಪನ ಕಚೇರಿಯಲ್ಲಿ ರೈತರ ಕೆಲಸಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಜಮೀನು ಸರ್ವೇ ಮಾಡಲು ಅರ್ಜಿ ಸಲ್ಲಿಸಿ ಹಲವಾರು ತಿಂಗಳು ಕಳೆದರೂ ಜಮೀನು ಸರ್ವೇ ಮಾಡಲು ಬರುತ್ತಿಲ್ಲ. ಸರ್ವೇ ಅಧಿಕಾರಿಗಳನ್ನು ವಿಚಾರಿಸಿದರೆ, ನಿಮ್ಮ ದಾಖಲಾತಿಗಳು ಕಳೆದಿವೆ ಮತ್ತೊಮ್ಮೆ ಅರ್ಜಿ ಸಲ್ಲಿಸಿ ಎಂದು ಹೇಳುತ್ತಿದ್ದಾರೆ ಎಂದು ಜನರು ದೂರಿದರು.

ಮಳಿಗೆ ನಿರ್ಮಿಸಲು ವಿನಂತಿ: ಬೀದಿ ವ್ಯಾಪಾರಸ್ಥರಿಗೆ ವ್ಯಾಪಾರ ವಹಿವಾಟು ನಡೆಸಲು ಮಳಿಗೆ ಇಲ್ಲದ ಕಾರಣ ಪುಟ್‌ಪಾತ್‌ಗಳಲ್ಲಿ ವ್ಯಾಪಾರ ಮಾಬೇಕಾಗಿದೆ. ಆದ್ದರಿಂದ ಹಳೇ ತಹಸೀಲ್ದಾರ್ ಕಚೇರಿ ಎದುರು ಮಳಿಗೆ ನಿರ್ಮಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುವಂತೆ ವಿನಂತಿಸಿಕೊಂಡರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ರವದಿ, ಸಂಗಮ್ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಜಯಗೌಡ ಪಾಟೀಲ, ಮುಖಂಡರಾದ ರವಿ ಕರಾಳೆ, ಗುರು ಪಾಟೀಲ, ಚಂದು ಗಂಗನ್ನವರ, ಶಾನುಲ್ ತಹಸೀಲ್ದಾರ್, ರಿಷಭ್ ಪಾಟೀಲ, ಬಂಡು ಹತನೂರೆ, ಅಮರ ನಲವಡೆ, ಅಜಿತ್ ಕರಜಗಿ, ಮೌನೇಶ ಪೋತದಾರ, ರಾಜು ಸಿದ್ನಾಳ, ಸುನೀಲ ಪಾಟೀಲ, ಬಸವರಾಜ ಕೋಳಿ, ಮಹೇಶ ಹಟ್ಟಿಹೊಳಿ, ಕಿರಣ ರಜಪೂತ, ಅರುಣ ಹುದ್ದಾರ, ಭೀಮಗೌಡ ಗಿರಿಗೌಡನವರ, ದಯಾನಂದ ಪಾಟೀಲ, ಭೀಮಸೇನ ಬಾಗಿ, ಸಂಘದ ವ್ಯಸ್ಥಾಪಕ ನಿರ್ದೇಶಕ ರವೀಂದ್ರ ಪಾಟೀಲ, ವ್ಯವಸ್ಥಾಪಕ ಡಿ.ಎಸ್, ನಾಯಿಕ, ಇಂಜಿನಿಯರ್ ನೇಮಿನಾಥ ಖೇಮಲಾಪೂರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net