ಜನರ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸಿ

FotoJet 20 2
Published on

 ಅಧಿಕಾರಿಗಳಿಗೆ ಶಾಸಕ ಸಿ.ಬಿ.ಸುರೇಶ್‌ಬಾಬು ಸೂಚನೆ

ಚಿಕ್ಕನಾಯಕನಹಳ್ಳಿ: ಜನರು ತಮ್ಮ ಬಳಿ ಬಂದು ತಮ್ಮ ಸಮಸ್ಯೆಗಳನ್ನು ತಿಳಿಸಿದಾಗ ಅವರೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಅವರ ಸಮಸ್ಯೆ ಬಗೆ ಹರಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಸೂಚಿಸಿದರು.

ಪಟ್ಟಣದಲ್ಲಿ ಶುಕ್ರವಾರ ಮನೆಬಾಗಿಲಿಗೆ ಮನೆಮಗ ಕಾರ್ಯಕ್ರಮದಡಿ 5,6,7 ಹಾಗೂ 8ನೇ ವಾರ್ಡ್‌ಗಳಲ್ಲಿ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿಯಿಂದಾಗಿ ರಸ್ತೆಗಳು ಹಾಳಾಗಿವೆ. ಅವುಗಳನ್ನು ಸರಿಪಡಿಸಲು ಈಗಾಗಲೇ 50 ಕೋಟಿ ರೂ. ಅನುದಾನಕ್ಕೆ ಕ್ರಮ ಕೈಗೊಂಡಿದ್ದು, ಇದರೊಂದಿಗೆ ಪಟ್ಟಣದಲ್ಲಿನ ಪ್ರತಿ ಮನೆಗಳಿಗೂ ನಲ್ಲಿ ಹಾಕುವಂತಹ ಅಮೃತ್ ಜಲ್ ಯೋಜನೆಯು 74 ಕೋಟಿಯ ಅನುದಾನದಲ್ಲಿ ನಡೆಯಲಿದೆ. ನಲ್ಲಿ ಅಳವಡಿಸಲು ರಸ್ತೆ ಹಾಳು ಮಾಡುತ್ತಾರೆ ಅದ್ದರಿಂದ ಈ ಯೋಜನೆ ಸಂಪೂರ್ಣವಾದ ನಂತರದಲ್ಲಿ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

7ನೇ ವಾರ್ಡಿನ ಸದಸ್ಯೆ ಮಮತಾ ದೃವಕುಮಾರ್ ಮಾತನಾಡಿ,ಎಲ್ಲ ಇಲಾಖೆಯ ಅಧಿಕಾರಿಗಳು ನಿಮ್ಮ ಸಮಸ್ಯೆ ಆಲಿಸಲು ನಿಮ್ಮ ಬಳಿಗೆ ಬಂದಿದ್ದು, ಜನರು ನಿಮ್ಮ ವೈಯಕ್ತಿಕ ಅಥವಾ ಸಮಾಜದ ಸಮಸ್ಯೆಗಳನ್ನು ಅರ್ಜಿಯ ಮೂಲಕ ತಿಳಿಸಿ ಸ್ಥಳದಲ್ಲೇ ಪರಿಹಾರಿಸಲಿಕೊಳ್ಳಬೇಕು ಎಂದರು.

ಶೆಟ್ಟಿಕೆರೆ ಗೇಟ್‌ನಿಂದ ಬನಶಂಕರಿ ಬಡಾವಣೆಗೆ ಬರುವಂತಹ ರಸ್ತೆಗಳಲ್ಲಿ ಬೀದಿ ದೀಪಗಳು ಇಲ್ಲ, ರಸ್ತೆಗಳು ಹಾಳಾಗಿದ್ದು, ದುರಸ್ತಿ ಮಾಡಿಸುವಂತೆ, ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಗಣೇಶ ದೇವಾಲಯದ ಬಳಿ ಸಮುದಾಯಭವನ ನಿರ್ಮಿಸುವಂತೆ ಹಾಗೂ ಕೇದಿಗೆಹಳ್ಳಿಯ ಭಾಗದಲ್ಲಿ ನೀಡಿರುವಂತಹ ಮನೆಗಳ ನಿವೇಶನಗಳ ಹಕ್ಕುಪತ್ರಗಳಲ್ಲಿರುವಂತಹ ಸರ್ವೇ ನಂ. ಬದಲಾಗಿದ್ದು, ಈ ಸಮಸ್ಯೆ ಬಗೆಹರಿಸುವಂತೆ ಮನವಿ ಸಾರ್ವಜನಿಕರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಮಂಜುನಾಥಗೌಡ, ಪುಷ್ಪಾ ಹನುಮಂತರಾಜು, ಮಲ್ಲಿಕಾರ್ಜುನಯ್ಯ, ಮಲ್ಲೇಶಯ್ಯ, ಮುಖಂಡರಾದ ಕೆ.ಜಿ.ಕೃಷ್ಣೇಗೌಡ, ಸುಗಂದರಾಜು, ಮಹಲಿಂಗಯ್ಯ, ದೃವಕುಮಾರ್, ಸುಬ್ರಮಣ್ಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net