ಬಂಕಾಪುರದಲ್ಲಿ ಬಿಡುವು ಕೊಟ್ಟ ಮಳೆರಾಯ

Bankapur Rain
Published on

ಬಂಕಾಪುರ: ಕಳೆದ ಕೆಲ ದಿನಗಳಿಂದ ಸತತವಾಗಿ ಸುರಿಯುತ್ತಿರುವ ಭಾರಿ ಮಳೆ ಶನಿವಾರ ತುಸು ಬಿಡುವು ನೀಡಿದೆ. ಕೋಡಿ ಬಿದ್ದಿರುವ ಕೆರೆಯಂಗಳ ಮತ್ತು ಕಾಲುವೆಗಳಲ್ಲಿ ಜನರು ಮೀನು ಹಿಡಿಯುವ ದೃಶ್ಯ ಸಮೀಪದ ಶಿಡ್ಲಾಪುರ ಗ್ರಾಮದ ಡೊಂಕೇರಿಯಲ್ಲಿ ಕಂಡು ಬಂದಿತು.
ಜುಲೈ ಆರಂಭದಿಂದಲೂ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕೆರೆ-ಕಟ್ಟೆಗಳು ಮೈದುಂಬಿ ಹರಿಯುತ್ತಿರುವುದನ್ನು ಕಂಡು ರೈತರು ಸಂತಸಪಟ್ಟರೆ, ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳೆಲ್ಲ ಭಾಗಶಃ ಜಲಾವೃತವಾಗಿ ಕೊಳೆಯಲಾರಂಭಿಸಿರುವುದು ಆತಂಕ ಉಂಟು ಮಾಡಿದೆ. ಅತಿಯಾದ ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಿ ಬೆಳೆಗಳೆಲ್ಲ ಕೊಳೆಯಲಾರಂಭಿಸಿವೆ. ಹದಿನೈದು ದಿನಗಳಿಂದ ಮರೆಯಾಗಿದ್ದ ಸೂರ್ಯ ಶನಿವಾರ ಬೆಳಗ್ಗೆ ಮುಖ ತೋರಿದ್ದಾನೆ. ಹೀಗಾಗಿ ಮಳೆ ಬಿಡುವು ಕೊಟ್ಟಿದ್ದರಿಂದ ಹಳ್ಳ-ಕೊಳ್ಳಗಳತ್ತ ತೆರಳಿ ಬಲೆ ಬೀಸಿ ಮೀನು ಹಿಡಿಯುವ ಕಾಯಕದಲ್ಲಿ ಬಹುತೇಕರು ಮಗ್ನರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net