ವಿದ್ಯೆಯಿಂದ ಗೌರವ, ಸ್ಥಾನಮಾನ ವೃದ್ಧಿ

Mururu
Published on

ಕುಮಟಾ: ಮನುಷ್ಯ ಎಷ್ಟೇ ಸುಂದರ, ಆಕರ್ಷಕವಾಗಿದ್ದರೂ ವಿದ್ಯೆ ಇಲ್ಲದಿದ್ದರೆ ಸಾಮಾಜಿಕ ಕಡೆಗಣನೆ ಎದುರಿಸಬೇಕಾಗುತ್ತದೆ. ವಿದ್ಯೆಯಿಂದ ಸಂಸ್ಕಾರ, ಗೌರವ, ಸ್ಥಾನಮಾನಗಳ ಜತೆಗೆ ಮಾನಸಿಕ, ಶಾರೀರಿಕ ಸೌಂದರ್ಯ ವೃದ್ಧಿಯಾಗುತ್ತದೆ ಎಂದು ಕೆಎಂಎಫ್ ನಿವೃತ್ತ ಜಂಟಿ ನಿರ್ದೇಶಕ ಡಿ.ಎಸ್.ಹೆಗಡೆ ಹೇಳಿದರು.

ತಾಲೂಕಿನ ಮೂರೂರು-ಕಲ್ಲಬ್ಬೆಯ ವಿದ್ಯಾನಿಕೇತನ ಸಂಸ್ಥೆಯ ಪ್ರಗತಿ ವಿದ್ಯಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಿಕ್ಷಕ ರಾಷ್ಟ್ರ ರಕ್ಷಕ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಅಭಿಪ್ರೇರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಗತ್ತು ವಿದ್ಯಾವಂತನನ್ನು ಗುರುತಿಸುತ್ತದೆ. ಜೀವನದ ಮೌಲ್ಯಗಳನ್ನು ಅರ್ಥ ಮಾಡಿಕೊಂಡು ದೇಶದ ಅಭಿವೃದ್ಧಿಗೆ ಪೂರಕವಾದ, ಹಿತಕರವಾದ ವಿದ್ಯೆಯನ್ನು ಕಲಿತು ಒಳ್ಳೆಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾನಿಕೇತನದ ಕಾರ್ಯಾಧ್ಯಕ್ಷ ಆರ್.ಜಿ.ಭಟ್ಟ ಮಾತನಾಡಿದರು. ನಿವೃತ್ತ ಶಿಕ್ಷಕರಾದ ಗಜಾನನ ಎಸ್. ಹೆಗಡೆ, ಪ್ರಭಾಕರ ಎಂ.ಭಟ್ಟ, ಸುಮನಾ ಎಚ್.ಭಟ್ಟ ಅವರನ್ನು ಸನ್ಮಾನಿಸಲಾಯಿತು.

ಹೊಸದುರ್ಗ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ನವೀನ ಎಚ್.ಎಸ್ ಅವರು ಯಶಸ್ವಿಯಾಗಿ ಪರೀಕ್ಷೆ ಎದುರಿಸುವ ಕುರಿತು ಉಪನ್ಯಾಸ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಟಿ. ಎಸ್. ಭಟ್ಟ, ಟಿ.ಆರ್. ಜೋಶಿ, ಜಿ.ಎಸ್. ಹೆಗಡೆ, ಹರಿಶ್ಚಂದ್ರ ಹೆಗಡೆ, ಜಿ.ವಿ. ಹೆಗಡೆ, ಐ.ಪಿ. ಭಟ್ಟ, ಎಸ್.ವಿ. ಹೆಗಡೆ ಭದ್ರನ್, ಎಂ.ಪಿ. ಭಟ್ಟ, ಡಾ. ಎಸ್.ವಿ. ಭಟ್ಟ, ಪ್ರಾಚಾರ್ಯ ಜಿ.ಎಂ. ಭಟ್ಟ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net