ಯುವ ಪೀಳಿಗೆ ಗುರು, ಹಿರಿಯರನ್ನು ಗೌರವಿಸಿ

16mlv1
Published on

ಮಳವಳ್ಳಿ: ಯುವ ಪೀಳಿಗೆ ಗುರು ಹಿರಿಯರನ್ನು ಗೌರವಿಸುವುದರ ಜತೆಗೆ ಅವರ ನೀಡುವ ಉತ್ತಮ ಸಲಹೆಗಳನ್ನು ಅನುಸರಿಸಿದರೆ ಸಮಾಜದಲ್ಲಿ ಉತ್ತಮ ಪ್ರಜೆಯಾಗುವುದರ ಮೂಲಕ ನಮ್ಮ ದೇಶದ ಸಂಸ್ಕೃತಿಯ ಭದ್ರ ಬುನಾದಿಗಳಾಗಬಹುದು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಐಶ್ಚರ್ಯ ಚಿದಾನಂದ ಪಟ್ಟಣಶೆಟ್ಟಿ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಯವರೆಗೆ ತಮ್ಮ ನಿತ್ಯ ಬದುಕಿಗೆ ಎಲ್ಲ ರೀತಿಯಲ್ಲೂ ಸಲಹೆ ಸಹಕಾರ ನೀಡುವುದಲ್ಲದೆ ಬಾಲ್ಯದಲ್ಲಿ ಮಾಡುವ ತಪ್ಪುಗಳನ್ನು ತಿದ್ದಿ ಬುದ್ಧಿ ಹೇಳುವವರು ಮನೆಯಲ್ಲಿ ಪಾಲಕರು ಹಾಗೂ ಶಾಲಾ-ಕಾಲೇಜುಗಳಲ್ಲಿ ಗುರುಗಳಾಗಿರುತ್ತಾರೆ ಎಂದರು.
ರಾಷ್ಟ್ರೀಯ ಯುವ ದಿನಾಚರಣೆ ಕುರಿತು ಉಪನ್ಯಾಸಕ ಕೆ.ಎಂ.ಸುರೇಶ್, ಸಾಮಾನ್ಯ ಕಾನೂನು ಜಾಗೃತಿ ಬಗ್ಗೆ ವಕೀಲ ಜಗದೀಶ ಉಪನ್ಯಾಸ ನೀಡಿದರು.

ಪ್ರಾಂಶುಪಾಲ ಕೆ.ಟಿ.ವೆಂಕಟೇಶ್, ಪುರ ಪೋಲಿಸ್ ಠಾಣೆ ಎಎಸ್‌ಐ ಪುಟ್ಟಮಾದು, ದೈಹಿಕ ಪರಿವೀಕ್ಷಕ ರೇವಣಸಿದ್ದಪ್ಪ, ವಕೀಲರಾದ ಎ.ಎಂ.ಮಲ್ಲಪ್ಪ, ವೆಂಕಟೇಶ್, ಚಂದ್ರಶೇಖರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net