ಪ್ರಜಾಪ್ರಭುತ್ವದ ಆಶಯ ಗೌರವಿಸಿ

DEMOCRACY
Published on

ನರಗುಂದ: ಪ್ರಜಾಪ್ರಭುತ್ವ ಕೇವಲ ಸಾಂವಿಧಾನಿಕ ರಚನೆಯಲ್ಲ. ಅದೊಂದು ಚೈತನ್ಯ ಹಾಗೂ ನಮ್ಮೆಲ್ಲರ ಜೀವನದ ಹರಿವಾಗಿದೆ. ಸಮಾಜದ ಪ್ರತಿಯೊಬ್ಬರೂ ಪ್ರಜಾಪ್ರಭುತ್ವದ ಆಶಯಗಳನ್ನು ಗೌರವಿಸಬೇಕು ಎಂದು ತಹಸೀಲ್ದಾರ್ ಶ್ರೀಶೈಲ್ ತಳವಾರ ಹೇಳಿದರು.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪಟ್ಟಣದ ಶ್ರೀಸಿದ್ಧೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂವಿಧಾನ ಪೀಠಿಕೆ ಓದುವ ಪ್ರತಿಜ್ಞಾವಿಧಿ ಬೋಧನೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರೊ. ದ್ಯಾಮಣ್ಣ ಗೊಬ್ಬರಗುಂಪಿ ಮಾತನಾಡಿ, ಯುವಕರು ಭ್ರಷ್ಟಾಚಾರ, ಭಯೋತ್ಪಾದನೆಯ ವಿರುದ್ಧ ಎಲ್ಲರೂ ಧ್ವನಿ ಎತ್ತಬೇಕು. ಸಂವಿಧಾನದ ಆಶಯ, ಗುರಿ, ಉದ್ದೇಶಗಳನ್ನು ಪಾಲಿಸಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಅಮಿತ್ ತಾರದಾಳೆ, ತಾಪಂ ಇಒ ಮಂಜುಳಾ ಹಕಾರಿ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಫ್. ಮಜ್ಜಗಿ, ಶಿವಾಜಿ ಸಾಠೆ, ಆನಂದ ನರಸನ್ನವರ, ರಿಯಾಜ್ ಕೊಣ್ಣೂರ, ರಾಮಕೃಷ್ಣ ಗೊಂಬಿ, ಎಸ್.ಕೆ. ದಂಡಾಪೂರ, ಎಚ್.ಎಂ. ಪಾಣಿಗಟ್ಟಿ, ವಿಜಯ ಚಲವಾದಿ, ದತ್ತು ಜೋಗಣ್ಣವರ, ಎಫ್.ವೈ. ದೊಡಮನಿ, ಎನ್.ಆರ್. ನಿಡಗುಂದಿ, ಆನಂದ ಭೋವಿ, ಕೆ.ಬಿ. ಖಲೀಫ್, ಎಸ್.ಎಲ್. ಪಾಟೀಲ, ನೀಲಪ್ಪ ಗುಡದನ್ನವರ, ಎ.ಆರ್. ಭೋವಿ, ಎಂ.ಆರ್. ಜೋರಂ, ಐ.ಪಿ. ಚಂದೂನವರ, ಭೀರಪ್ಪ ಬಿದರಗಡ್ಡಿ, ಸಿದ್ದಾರೂಡ ಪಾತ್ರೋಟಿ ಇತರರಿದ್ದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಎಂ. ಬಡಿಗೇರ, ವಿ.ಎಫ್. ಭೀಮಣ್ಣವರ, ವಿನೋದ ಅಡಕೆ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net