ಯೋಧರಿಗೆ ಗೌರವ ನೀಡಿ

Respect the warriors
ಬಾದಾಮಿ ತಾಲೂಕಿನ ಚೊಳಚಗುಡ್ಡದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಶಿವಯೋಗ ಮಂದಿರದ ಉಪಾಧ್ಯಕ್ಷ ಶ್ರೀ ಸದಾಶಿವ ಮಹಾಸ್ವಾಮಿಗಳು ಮಾತನಾಡಿದರು. ಪೂಜ್ಯ ಶಾಂತಲಿಂಗ ಶ್ರೀಗಳು ಗೌರವ ಕಾರ್ಯದರ್ಶಿ ಆರ್. ಬಿ. ಚಿನಿವಾಲರ, ಕಾರ್ಯದರ್ಶಿ ಮಹಾಂತೇಶ ಹಿರೇಮಠ ಇತರರಿದ್ದರು.
Published on

ಬಾದಾಮಿ: ಕಾರ್ಗಿಲ್ ವಿಜಯೋತ್ಸವಕ್ಕೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಭೈರನಹಟ್ಟಿ ಪೂಜ್ಯರು ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಶಿವಯೋಗ ಮಂದಿರದ ಉಪಾಧ್ಯಕ್ಷ ಶ್ರೀ ಸದಾಶಿವ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಚೊಳಚಗುಡ್ಡದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ದೊರೆಸ್ವಾಮಿ ವಿರಕ್ತಮಠ ಬೈರನಹಟ್ಟಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ಜ್ಯೋತಿ ರಥಯಾತ್ರೆ ಪೂರ್ವಭಾವಿ ಸಭೆ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ದೇಶ ರಕ್ಷಣೆಯಲ್ಲಿ ತೊಡಗಿದ ಪ್ರತಿಯೊಬ್ಬ ಯೋಧನಿಗೂ ಗೌರವ ನೀಡುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಅ. 10 ರಂದು ನಡೆಯುವ ರಥಯಾತ್ರೆ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ದೇಶಪ್ರೇಮ ಮೆರೆಯಬೇಕಿದೆ ಎಂದು ಅವರು ತಿಳಿಸಿದರು.

ಪೂಜ್ಯ ಶಾಂತಲಿಂಗ ಶ್ರೀಗಳು ಮಾತನಾಡಿ, ಶಿವಯೋಗಮಂದಿರ ಉಪಾಧ್ಯಕ್ಷ, ಹಾವೇರಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮೀಜಿ, ನವಗ್ರಹ ಹಿರೇಮಠದ ಶಿವಪೂಜಾ ಶಿವಾಚಾರ್ಯರು, ಪೂಜ್ಯ ಶಾಂತಲಿಂಗ ಸ್ವಾಮೀಜಿ, ಬಾದಾಮಿ ಶರಣ ಹಜರತ್ ಸೈಯದ್ ಮುಬಾರಕ ಬಾದಷಾ, ನರಗುಂದ ಶರಣ ಬಾಬು ಅಜ್ಜನವರು, ಬಾದಾಮಿ ಪ್ರಶಾಂತ ದೇವರು ಸಾನ್ನಿಧ್ಯದಲ್ಲಿ ಕಾರ್ಗಿಲ್ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಚೊಳಚಗುಡ್ಡ ವೀರಯೋಧ ಶಿವಬಸಯ್ಯ ಕುಲಕರ್ಣಿಯವರ ವೀರಗಲ್ಲಿನಿಂದ ಪ್ರಾರಂಭವಾಗುವ ಜ್ಯೋತಿರಥಯಾತ್ರೆ ಬನಶಂಕರಿ, ಬಾದಾಮಿ, ಮುತ್ತಲಗೇರಿ, ತಿಮ್ಮಾಪುರ ಎಸ್.ಎನ್., ಕುಳಗೇರಿ ಕ್ರಾಸ್ ಮಾರ್ಗವಾಗಿ ಗೋವನಕೊಪ್ಪ, ಕೊಣ್ಣೂರ, ಭೈರನಹಟ್ಟಿ ಶ್ರೀಮಠ ತಲುಪಲಿದೆ ತಿಳಿಸಿದರು.

ಗೌರವ ಕಾರ್ಯದರ್ಶಿ ಆರ್. ಬಿ. ಚಿನಿವಾಲರ, ಕಾರ್ಯದರ್ಶಿ ಮಹಾಂತೇಶ ಹಿರೇಮಠ, ಸಂಗಪ್ಪ ಹೂಗಾರ, ಗುರಪ್ಪ ವಾಲಿ, ಶೇಖಪ್ಪ ಪಿಡಿಯಪ್ಪನವರ, ಕಳಕಪ್ಪ ಹುಯಿಲಗೋಳ, ಎಂ.ಪಿ. ಧಾರವಾಡ, ವೀರಣ್ಣ ಸಾತನ್ನವರ, ಮುತ್ತಣ್ಣ ಹುಂಬಿ, ಪ್ರಕಾಶ ದನ್ನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net