ಭೂಮಿಯನ್ನು ತಾಯಿಯಂತೆ ಗೌರವಿಸಿ: ಫಾದರ್ ಡಾ.ಲೋರ್ಡು ಪ್ರಸಾದ್ ಜೋಸೆಫ್

5
Published on

ಮೈಸೂರು: ನಗರದ ಸಂತ ಫಿಲೋಮಿನಾ ಕಾಲೇಜಿನಲ್ಲಿ ಫಾದರ್ ಡಾ.ಲೋರ್ಡು ಪ್ರಸಾದ್ ಜೋಸೆಫ್ ಅವರು ಸಸಿಗಳಿಗೆ ನೀರು ಹಾಕುವ ಮೂಲಕ ವಿಶ್ವ ಪರಿಸರ ದಿನ ಕಾರ್ಯಕ್ರಮ ಉದ್ಘಾಟಿಸಿದರು.

ಭೂಮಿಯನ್ನು ತಾಯಿಯಂತೆ ಗೌರವಿಸುವುದು ಮತ್ತು ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಎಲ್ಲರೂ ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಪ್ರಾಂಶುಪಾಲ ಡಾ.ರವಿ ಜೆ.ಡಿ.ಸಾಲ್ದಾನ್ಹಾ ಮಾತನಾಡಿ, ಪರಿಸರ ಸಂರಕ್ಷಣೆ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು. ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕು ಎಂದು ಕೋರಿದರು. ಕಾಲೇಜಿನ ಆವರಣದಲ್ಲಿ 300 ಹಣ್ಣಿನ ಸಸಿಗಳನ್ನು ನೆಡಲಾಯಿತು. ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟು, ಪರಿಸರ ಕಾಳಜಿ ಅಭಿಯಾನಕ್ಕೆ ಶ್ರಮಿಸಿದರು.

ನಿರ್ವಾಹಕ ಜ್ಞಾನಪ್ರಕಾಶ, ರೆಕ್ಟರ್ ಸಹಾಯಕ ಎಸ್.ಡೇವಿಡ್ ಸಗಯರಾಜ್, ಅಕಾಡೆಮಿಕ್ ಉಪ ಪ್ರಾಂಶುಪಾಲ ನಾಗರಾಜ್ ಅರಸ್, ಸಂಯೋಜಕ ಡಾ.ಸಿ.ಎ.ನೂರ ಮುಬಾಶೀರ್, ಸಹ ಸಂಯೋಜಕರಾದ ಎ.ಥಾಮಸ್ ಗುಣಸೀಲನ್, ಡಾ.ದೀಪಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net