ಹಿರಿಯ ನಾಗರಿಕರಿಗೆ ಗೌರವ ನೀಡಿ

05web
Published on

ಹಿರಿಯ ಸಿವಿಲ್​ ನ್ಯಾಯಾಧೀಶ ಎಂ.ಪಿ.ಅನಿಲ್​ ಪ್ರಕಾಶ್​ ಸಲಹೆ

ನೆಲಮಂಗಲ:ಹಿರಿಯ ನಾಗರಿಕರನ್ನು ಚೆನ್ನಾಗಿ ನೋಡಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸುವುದು ಎಲ್ಲರ ಜವಾಬ್ದಾರಿ ಎಂದು ಹಿರಿಯ ಸಿವಿಲ್​ ನ್ಯಾಯಾಧೀಶ ಎಂ.ಪಿ.ಅನಿಲ್​ ಪ್ರಕಾಶ್​ ತಿಳಿಸಿದರು.
ನಗರದ ಡಾ.ಬಿ.ಆರ್​.ಅಂಬೇಡ್ಕರ್​ ಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂ ಹಾಗೂ ನಗರ ಠಾಣೆ ಸಹಯೋಗದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗುರುಕುಲ ಸ್ಥಾಪಿಸಿ ವಿಶ್ವಕ್ಕೆ ಮಾದರಿಯಾಗಿದ್ದ ದೇಶದಲ್ಲಿ ಅನಾಥಾಶ್ರಮಗಳು ಹೆಚ್ಚಾಗುತ್ತಿರುವುದು ವಿಷಾದಕರ. ಹಿರಿಯ ನಾಗರಿಕರ ಸಂರಕ್ಷಣೆಗಾಗಿ ಅನೇಕ ಕಾನೂನು ಜಾರಿಯಲ್ಲಿದ್ದು, ಅವುಗಳ ಉಪಯೋಗ ಪಡೆದುಕೊಳ್ಳಬೇಕು. ಹಿರಿಯ ನಾಗರಿಕರಿಗೆ ಯಾವುದೇ ಕಚೇರಿಗಳಲ್ಲಿ, ಆಸ್ಪತ್ರೆಗಳಲ್ಲಿ ಅನ್ಯಾಯವಾಗುತ್ತಿದೆ ಎಂದರೆ ತಾಲೂಕು ಕಾನೂನು ಸೇವಾ ಪ್ರಾಧಿಕಾರಕ್ಕೆ ಲಿಖಿತವಾಗಿ ತಿಳಿಸಿದರೆ, ಸೂಕ್ತ ಕ್ರಮ ಕೈಗೊಂಡು ರಕ್ಷಣೆ ಒದಗಿಸಲಾಗುವುದು. ಮಕ್ಕಳಿಗೆ ತಮ್ಮ ವಯಸ್ಸಾದ ತಂದೆ ತಾಯಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಇದೆ. ಹಿರಿಯ ನಾಗರಿಕರನ್ನು ರ್ನಿಲಸಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಲ್ಲ ರೀತಿಯ ಸಹಕಾರ: ಪ್ರತಿಯೊಬ್ಬರು ಹಿರಿಯರ ನೋವು ನಲಿವುಗಳಲ್ಲಿ ಭಾಗಿಯಾಗಿ ಅವರ ಬೇಕು&ಬೇಡಗಳನ್ನು ಆಲಿಸಿ ಅವರಿಗೆ ಮೂಲಸೌಲಭ್ಯ ಒದಗಿಸಬೇಕು ಎಂದು ಪ್ರಧಾನ ಸಿವಿಲ್​ ನ್ಯಾಯಾಧೀಶ ಎಂ.ಟಿ.ದೀಪು ತಿಳಿಸಿದರು. ಹಿರಿಯ ನಾಗರಿಕರಿಗಾಗಿ ವಾಹನಗಳಲ್ಲಿ ಆಸನಗಳನ್ನು ಕಾಯ್ದಿರಿಸಿ ಅನುಕೂಲ ಕಲ್ಪಿಸಿರುತ್ತಾರೆ. ಅವುಗಳನ್ನು ಅವರಿಗೆ ನೀಡಿ ಹಿರಿಯರ ಸಹಾಯಕ್ಕೆ ಮುಂದಾಗಬೇಕು. ಹಿರಿಯ ನಾಗರಿಕರು ಹಕ್ಕುಗಳನ್ನು ಕಾನೂನು ಬದ್ಧವಾಗಿ ಚಲಾಯಿಸಲು ಕಾನೂನು ಸೇವೆಗಳ ಪ್ರಾಧಿಕಾರ ಎಲ್ಲ ರೀತಿಯ ಸಹಕಾರ ನೀಡುತ್ತಿದೆ ಎಂದರು.

ಪಿಂಚಣಿ ವಿತರಣೆ: ನಗರದ ನಿವಾಸಿ ಲಲಿತಮ್ಮ, ಸಿದ್ದಮ್ಮ ಅವರಿಗೆ ವೃದ್ಧಾಪ್ಯ ಪಿಂಚಣಿ, ಚಂದ್ರಮ್ಮ ಅವರಿಗೆ ವಿಧವಾ ಪಿಂಚಣಿ ವಿತರಣೆ ಮಾಡಲಾಯಿತು.

ಸಹಾಯಕ ಸರ್ಕಾರಿ ಅಭಿಯೋಜಕಿ ಶ್ರೀದೇವಿ, ವಿಶೇಷ ತಹಸೀಲ್ದಾರ್​ ವಿ.ಭಾಗ್ಯಾ, ಡಿವೈಎಸ್​ಪಿ ಕೆ.ಎಸ್​.ಜಗದೀಶ್​, ನಗರ ಪೊಲೀಸ್​ ಠಾಣೆ ಇನ್​ಸ್ಪೆಕ್ಟರ್​ ಶಶಿಧರ್​, ಸಬ್​ ಇನ್​ಸ್ಪೆಕ್ಟರ್​ ನಂಜೇಗೌಡ, ಜಯಂತಿ, ಎಎಸ್​ಐ ಬಿ.ಎಸ್​.ರು, ವಕೀಲ ನಾಗೇಂದ್ರ, ಮುಖಂಡ ಕೆ.ಕೃಷ್ಣಪ್ಪ, ರಂಗನಾಥ್​, ದೊಡ್ಡರಾಮಯ್ಯ, ಎಂ.ಆರ್​.ತೀಥೇಶ್​ ಉಪಸ್ಥಿತರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net