ಸಮಾಜಮುಖಿ ಶಿಕ್ಷಕರಿಗೆ ಸಮಾಜದಿಂದ ಗೌರವ

ಸಮಾಜಮುಖಿ ಶಿಕ್ಷಕರಿಗೆ ಸಮಾಜದಿಂದ ಗೌರವ
Published on

ತಿ.ನರಸೀಪುರ: ಸಮಾಜಮುಖಿಯಾಗಿ, ನಿಸ್ವಾರ್ಥದಿಂದ ಕೆಲಸ ನಿರ್ವಹಿಸುವ ಶಿಕ್ಷಕರನ್ನು ಸಮಾಜ ಖಂಡಿತವಾಗಿ ಗೌರವಿಸುತ್ತದೆ. ಶಿಕ್ಷಕರ ಸೇವೆಗೆ ಋಣದ ಮನ್ನಣೆ ಇರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ ಹೇಳಿದರು.

ತಾಲೂಕಿನ ಸಿ.ಬಿ.ಹುಂಡಿ ಕ್ಲಸ್ಟರ್ ವ್ಯಾಪ್ತಿಯ ಚಂದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಯೋನಿವೃತ್ತಿ ಪಡೆದ ಮುಖ್ಯ ಶಿಕ್ಷಕ ಎಂ.ಕೊಂಗಯ್ಯ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು, ತಾವು ಕಲಿತ ಜ್ಞಾನವನ್ನು ಮಕ್ಕಳಿಗೆ ಕಲಿಸಿ ಮಕ್ಕಳಲ್ಲಿ ಜ್ಞಾನ ಮತ್ತು ಜವಾಬ್ದಾರಿಗಳನ್ನು ತಿಳಿಸುವಂತವರು ಶಿಕ್ಷಕರು ಎಂದರು.

ಮುಖ್ಯ ಶಿಕ್ಷಕ ಕಪ್ಪು ಚುಕ್ಕೆಯಿಲ್ಲದೆ, ಆರೋಪಗಳಿಲ್ಲದೆ ಯಶಸ್ವಿಯಾಗಿ ಮುನ್ನಡೆದರೆ ಅದಕ್ಕಿಂತ ಗೌರವ ಮತ್ತು ಸಾರ್ಥಕ ಸೇವೆ ಮತ್ತೊಂದಿಲ್ಲ. ಎಂ.ಕೊಂಗಯ್ಯ ಸಹ ಇದುವರೆಗೂ ಯಾವ ಆರೋಪ ಇಲ್ಲದೆ ಎಲ್ಲರ ಜತೆ ಅತ್ಯಂತ ವಿಶ್ವಾಸಾರ್ಹರಾಗಿ ತಮ್ಮ ವೃತ್ತಿ ಜೀವನವನ್ನು ಮುಗಿಸಿ ನಿವೃತ್ತಿಯ ದಡ ಸೇರಿರುವುದು ಅವರ ನಿಸ್ವಾರ್ಥ ಸೇವೆಯನ್ನು ಪ್ರಮಾಣಿಕರಿಸುತ್ತದೆ ಎಂದು ಎಸ್.ಸಿ.ಶಿವಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬೀಳ್ಕೋಡುಗೆ ಸಮಾರಂಭದಲ್ಲಿ ಗ್ರಾಮಸ್ಥರು ಮಕ್ಕಳು, ಹಳೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಪುಷ್ಪವೃಷ್ಟಿ ಮಾಡಿದರು. ಇಸಿಒ ಜಗದೀಶ್, ಬಿಆರ್‌ಸಿ ಮಹದೇವಸ್ವಾಮಿ, ಸಿಆರ್‌ಪಿ ಚೆಲುವರಾಜು, ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಎಸ್.ಸುಬ್ಬಣ್ಣ , ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಣ್ಣ, ಸಹ ಕಾರ್ಯದರ್ಶಿ ಕೆ.ವಿ.ಚಿತ್ರ ವಿಶಾಲಾಕ್ಷಿ, ಸಿದ್ದಮಲ್ಲಪ್ಪ, ಶಾಲೆಯ ಶಿಕ್ಷಕರಾದ ಸೂರ್ಯಕುಮಾರ್, ಜಯರಾಮ್, ಎಸ್.ಜ್ಯೋತಿ, ಶಾಂಭವಿ, ಗೀತಾ, ಎಸ್‌ಡಿಎಂಸಿ ಅಧ್ಯಕ್ಷ ಮಾದಲಾಂಬಿಕೆ, ಮುಖ್ಯ ಶಿಕ್ಷಕ ಧಮೆರ್ಂದ್ರ ಪ್ರಸಾದ್, ಗ್ರೀಟಾ, ಚಂದ್ರ ಕುಮಾರಿ, ಶಾಂತರಾಜು, ಅಡುಗೆ ಸಿಬ್ಬಂದಿ ಮಹದೇವಮ್ಮ, ಹೇಮಾ, ಕೊಂಗಯ್ಯ ಅವರ ಪತ್ನಿ ಜಯಲಕ್ಷ್ಮೀ, ಪುತ್ರ ಕೇಶವ್ ರಾಜ್, ಕಿಶೋರ್ ಗೌಡ, ನಿವೇದಿತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net