ಮಹಿಳೆಯರಿಗೆ ನೀಡುವ ಗೌರವವೇ ನಿಜವಾದ ದೇವರ ಪೂಜೆ

Shree Bhadrakali Devi Siddapura
Published on

ಸಿದ್ದಾಪುರ: ಹಿರಿಯರನ್ನು ಗೌರವಿಸಬೇಕು. ನಮಗೆ ಆಸ್ತಿ ಬಿಟ್ಟು ಹೋದ ನಮ್ಮ ಹಿರಿಯರಿಗೆ ಅನ್ನ ಹಾಕಬೇಕು. ಮನೆಯ ಹೆಣ್ಣುಮಕ್ಕಳಿಗೆ ಅರಿಶಿನ-ಕುಂಕುಮ ನೀಡಬೇಕು. ಹೆಣ್ಣು ಮಕ್ಕಳೇ ಲಕ್ಷ್ಮೀಯರು. ನಾವು ಯಾವಾಗ ಮಹಿಳೆಯರನ್ನು ಗೌರವಿಸಿ ಪೂಜಿಸುತ್ತೇವೋ ಅದು ದೇವರ ಪೂಜೆಗೆ ಸಮಾನ ಎಂದು ಹೊಸನಗರ ಕಾರ್ತಿಕೇಯ ಪೀಠದ ಸಾರಂಗಜನ ಜಡ್ಡುವಿನ ಶ್ರೀ ಯೋಗೇಂದ್ರ ಸ್ವಾಮಿಗಳು ಹೇಳಿದರು.

ತಾಲೂಕಿನ ಲಂಬಾಪುರ ಸಮೀಪದ ಬರಗಾಲದ ಭದ್ರಕಾಳಿ ದೇವಿಯ ಪ್ರತಿಷ್ಠಾಪನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಸಾನ್ನಿಧ್ಯವಹಿಸಿ ಅವರು ಭಾನುವಾರ ಆಶೀರ್ವಚನ ನೀಡಿದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಪ್ರತಿಯೊಂದು ಮನೆಯಲ್ಲಿ ಮಕ್ಕಳಿಗೆ ಮಹಿಳೆಯರು ಉತ್ತಮ ಸಂಸ್ಕಾರ ಮತ್ತು ಶಿಕ್ಷಣ ನೀಡಬೇಕು.ನಿತ್ಯ ಮನೆಯಲ್ಲಿ ರಂಗೋಲಿ ಹಾಕಿ ಪೂಜೆ ಮಾಡುವಂತೆ ಮಕ್ಕಳಿಗೆ ಸಂಸ್ಕಾರ ಕಲಿಸಿ ಸನಾತನ ಹಿಂದೂ ಧರ್ಮ ಉಳಿಸುವುದಕ್ಕೆ ಮುಂದಾಗಬೇಕೆಂದರು.

ವಾಜಗೋಡ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಐ.ನಾಯ್ಕ, ಪ್ರಮುಖರಾದ ಸಿ.ಆರ್.ನಾಯ್ಕ , ದೇವಸ್ಥಾನ ಕಮೀಟಿಯ ಪದಾಧಿಕಾರಿಗಳಾದ ಜಿ.ಕೆ.ನಾಯ್ಕ, ನಾಗರಾಜ ನಾಯ್ಕ, ಕೆ.ಬಿ.ನಾಯ್ಕ, ಗ್ರಾಪಂ ಸದಸ್ಯ ಸುರೇಶ ನಾಯ್ಕ ಇತರರು ಉಪಸ್ಥಿತರಿದ್ದರು.

ಕಾಲಬೈರವೇಶ್ವರ ಟ್ರಸ್ಟ್ ಅಧ್ಯಕ್ಷ ಎನ್.ಡಿ.ನಾಯ್ಕ ಸ್ವಾಗತಿಸಿದರು.ಬಾಲಚಂದ್ರ ವಂದಿಸಿದರು.ಕೃಷ್ಣ ನಾಯ್ಕ ನಿರ್ವಹಿಸಿದರು.

ಇದೇ ಸಂದರ್ಭದಲ್ಲಿ ಶಾಸಕ ಭೀಮಣ್ಣ ನಾಯ್ಕ, ದೇವಾಲಯ ಕಟ್ಟಡಕ್ಕೆ ಸಹಾಯ ಹಾಗೂ ವಿವಿಧ ವಸ್ತುಗಳನ್ನು ದಾನ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net