ಭಾರತದಲ್ಲಿ ತಾಯಿಯ ಸ್ಥಾನಮಾನಕ್ಕೆ ಗೌರವ

horti 21-1
ಹೊರ್ತಿ ಸಮೀಪದ ಏಳಗಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಮತ್ತು ಹನುಮಾನ ದೇವರ ಕಲಶಾರೋಹಣ ಕಾರ್ಯಕ್ರಮದಲ್ಲಿ ಜೈನಾಪುರದ ಶ್ರೀ ರೇಣುಕಾ ಶಿವಾಚಾರ್ಯರು ಮಾತನಾಡಿದರು. ಶರಣಯ್ಯ ಹಿರೇಮಠ, ಶ್ರೀಮಂತಯ್ಯ ಹಿರೇಮಠ, ಮಹಾದೇವ ಗೌಡ ಪಾಟೀಲ, ಸಿದ್ದರಾಯ ಬಗಲಿ, ಕಾಮಣ್ಣ ಕರಕಿ, ಶ್ರೀಶೈಲ ಪಾಟೀಲ ಇತರರಿದ್ದರು.
Published on

ಹೊರ್ತಿ: ಭಾರತದೇಶದಲ್ಲಿ ತಾಯಿಯ ಸ್ಥಾನಮಾನಕ್ಕೆ ಬಹಳ ಗೌರವ ನೀಡಿದೆ ಎಂದು ಜೈನಾಪುರ ಶ್ರೀ ರೇಣುಕಾ ಶಿವಾಚಾರ್ಯರು ಹೇಳಿದರು.

ಸಮೀಪದ ಏಳಗಿ ಗ್ರಾಮದಲ್ಲಿ ಹನುಮಾನ ಮತ್ತು ವೀರಭದ್ರೇಶ್ವರ ದೇವರ ಕಲಶಾರೋಹಣ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.

ಈ ದೇಶದಲ್ಲಿ ತುಂಬಿ ಹರಿಯುವನದಿಗಳು ಪಶ್ಚಿಮದಲ್ಲಿ ಹುಟ್ಟಿ ಪೂರ್ವ ಸಮುದ್ರ ಸೇರುವ ಅನೇಕ ಪುಣ್ಯಕ್ಷೇತ್ರಗಳು ನೆಲೆಸಿವೆ. ಎಲ್ಲ ನದಿಗಳಿಗೆ ದೇವತೆ ಸಮಾನರಾದ ಹೆಣ್ಣುಮಕ್ಕಳ ಹೆಸರನ್ನು ಕರೆಯಲಾಗಿದೆ. ಹೆಣ್ಣು ಸಾಕ್ಷತ ಭಾರತ ಮಾತೆ. ಭಾರತಾಂಬೆ ಕನ್ನಡಮಾತಾ ಎಂದು ಸ್ಮರಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.

ಶರಣಯ್ಯ ಹಿರೇಮಠ, ಶ್ರೀಮಂತಯ್ಯ ಹಿರೇಮಠ, ಮಹಾದೇವ ಗೌಡ ಪಾಟೀಲ, ಸಿದ್ದರಾಯ ಬಗಲಿ, ಕಾಮಣ್ಣ ಕರಕಿ, ಶ್ರೀಶೈಲ ಪಾಟೀಲ, ರಾಜಕುಮಾರ ಪಾಟೀಲ, ಶಿವಾನಂದ ಅಷ್ಟಗಿ, ಕುಮಾರ ಮೇತ್ರಿ, ಸುಭಾಷ್ ದಂಭ, ಬಸವರಾಜ ಬಿರಾದಾರ, ಸುರಪ್ಪ ಕೋಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net