ಧರ್ಮ, ಸಂಪ್ರದಾಯದ ಪಾಲನೆ ಅಗತ್ಯ

9 TKE 2
Published on

ತರೀಕೆರೆ: ಸಂಘಟನೆ ದೃಷ್ಟಿಯಿಂದ ಸ್ಥಾಪಿಸುವ ಸಂಘ, ಸಂಸ್ಥೆ ಸಮಿತಿಗಳ ಲೆಕ್ಕಾಚಾರ ಪಾರದರ್ಶಕವಾಗಿದ್ದರೆ, ಸದಸ್ಯರು ಸೇರಿ ಸಮಾಜವೂ ವಿಶ್ವಾಸದಿಂದ ಕಾಣಲಿದೆ ಎಂದು ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಆರ್.ಎನ್.ಶ್ರೀಧರ್ ಹೇಳಿದರು.

ಪಟ್ಟಣದ ಬ್ರಾಹ್ಮಣ ಸೇವಾ ಸಮಿತಿ ಕಾರ್ಯಾಲಯದಲ್ಲಿ ಲೆಕ್ಕಪತ್ರ, ಸಮಗ್ರಮಾಹಿತಿ ಸಂಗ್ರಹಿಸಲು ಸ್ಥಾಪಿಸಿರುವ ನೂತನ ಗಣಕಯಂತ್ರ ಉದ್ಘಾಟಿಸಿ ಮಾತನಾಡಿ, ಬ್ರಾಹ್ಮಣ ಸೇವಾ ಸಮಿತಿ ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಗಳನ್ನು ಆಯಾ ಕಾಲಕ್ಕೆ ಆಯೋಜಿಸಿ ಸಮಾಜ ಸರಿದಾರಿಗೆ ಹೋಗುವಂತೆ ನೋಡಿಕೊಳ್ಳುತ್ತಿದೆ. ಪ್ರತಿಯೊಬ್ಬರೂ, ದೈವ ಧರ್ಮವನ್ನು ನಂಬಬೇಕು. ಅನಾದಿಕಾಲದಿಂದ ಹಿರಿಕರು ನಡೆಸಿಕೊಂಡು ಬಂದ ಸಂಪ್ರದಾಯಗಳನ್ನು ಪಾಲನೆ ಮಾಡಬೇಕು ಎಂದರು.

ಉಪಾಧ್ಯಕ್ಷ ಅನಂತ ಪದ್ಮನಾಭ, ಕಾರ್ಯದರ್ಶಿ ಡಿ.ಸಿ.ಶ್ರೀನಿವಾಸ್ ಮೂರ್ತಿ, ಖಜಾಂಚಿ ಬಿ.ಎನ್.ರಾಘವೇಂದ್ರ ಹೆಬ್ಬಾರ್, ನಿರ್ದೇಶಕರಾದ ಸಚಿನ್, ಅಚ್ಯುತ್ ಮೂರ್ತಿ, ಲಕ್ಷ್ಮೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net