

ಹುಬ್ಬಳ್ಳಿ : ಸಂಭವಿಸಬಹುದಾದ ಅವಘಡಗಳನ್ನು ಸಮಯಪ್ರಜ್ಞೆಯ ಕರ್ತವ್ಯದಿಂದ ತಪ್ಪಿಸಿದ ನೈಋತ್ಯ ರೈಲ್ವೆ ವಲಯದ ವಿವಿಧ ವಿಭಾಗಗಳ ಉದ್ಯೋಗಿಗಳನ್ನು ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಸೋಮವಾರ ಸನ್ಮಾನಿಸಿದರು.
ಕೆಟ್ವ್ಯಾನ್ ನಾಗೇಂದ್ರಸುಕ್ರು ಗೌಡ, ಟ್ರಾ್ಯಕ್ ಮೆಂಟೇನರ್ಗಳಾದ ದರಥಿರುಪತಿ, ಮುದ್ದಯ್ಯ ಜಿ. ಬಸವರಾಜ ಟಿ.ಎಚ್., ಸುರೇಶ ಕುಮಾರ, ಕೌಶಲ ಕುಮಾರ, ಸುರಜ ಶಾ, ಕಿ ಮ್ಯಾನ್ ಪವನಕುಮಾರ, ಲೋಕೊ ಪೈಲಟ್ ಮೃತ್ಯುಂಜಯ ಕುಮಾರ, ಹಿರಿಯ ಸಹಾಯಕ ಲೋಕೊ ಪೈಲಟ್ ಅರವಿಂದಕುಮಾರ ಗುಪ್ತಾ, ಲೋಕೊ ಪೈಲಟ್ ಸುಮನ ಸೌರಭ ಕುಮಾರ, ಟೆಕ್ನಿಶಿಯನ್ ಸೌಭಾಗ್ಯಮ್ಮ, ಅಂಜನಾ ಝಾ, ಸ್ಟೇಷನ್ ಮ್ಯಾನೇಜರ್ ಅಭಯ ಸಿಂಗ್, ಟ್ರಾ್ಯಕ್ ಮೆಂಟೇನರ್ ದಿನೇಶ ನಾಯಕ, ಎಸ್ಐಪಿಎಫ್ ಬಸವರಾಜ ವಾಥರ, ಹಿರಿಯ ವಿಭಾಗೀಯ ಇಂಜಿನಿಯರ್ ಎಸ್. ಧನಶೇಖರಯ್ಯ ಅವರನ್ನು ಸನ್ಮಾನಿಸಲಾಯಿತು. ವಲಯದ ಹಿರಿಯ ಅಧಿಕಾರಿಗಳು ಹಾಜರಿದ್ದರು.