ಹುತಾತ್ಮ ಯೋಧರಿಗೆ ಗೌರವ

2blrp1
Published on

ಬೇಲೂರು: ಸ್ವಾಭಿಮಾನದ ಬದುಕಿಗಾಗಿ 1818 ಜ.1ರಂದು ಮಹಾರಾಷ್ಟ್ರದ ಭೀಮನದಿ ತೀರದಲ್ಲಿ ನಡೆದ ಯುದ್ಧವೇ ಭೀಮ ಕೋರೇಗಾಂವ್ ಯುದ್ಧ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಜಿಲ್ಲಾ ಪ್ರಧಾನ ಸಂಚಾಲಕ ಲಕ್ಷ್ಮಣ್ ಹೇಳಿದರು.

ಕೋರೇಗಾಂವ್ ವಿಜಯೋತ್ಸವ ಹಾಗೂ ವೀರ ಯೋಧರ ಸ್ಮರಣಾರ್ಥ ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಸಂಜೆ ಭೀಮ ಮೇಣದ ಬತ್ತಿಗಳನ್ನು ಹಚ್ಚಿ ಹುತಾತ್ಮರಿಗೆ ಗೌರವ ಸಲ್ಲಿಸಿದ ನಂತರ ಮಾತನಾಡಿದ ಅವರು, ಯುದ್ಧದಲ್ಲಿ 500 ಸೈನಿಕರು 28 ಸಾವಿರದಷ್ಟಿದ್ದ ಪೇಶ್ವೆ ಸೈನ್ಯವನ್ನು 12 ಗಂಟೆಯಲ್ಲಿ ಬಗ್ಗು ಬಡಿದು ವಿಜಯಪತಾಕೆ ಹಾರಿಸಿದರು. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ದೇಶಾದ್ಯಂತ ಶೋಷಿತ ವರ್ಗಗಳಿಂದ ಭೀಮ ಕೋರೇಗಾಂವ್ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದರು.

ದಸಂಸ ಜಿಲ್ಲಾ ಸಮಿತಿ ಸದಸ್ಯ ಹೊಯ್ಸಳ, ತಾಲೂಕು ಸಂಚಾಲಕರಾದ ಧರ್ಮಯ್ಯ, ಸತೀಶ್, ಮಲ್ಲೇಶ್, ವಸಂತ್‌ಕುಮಾರ್, ಮುಖಂಡರಾದ ಚಂದ್ರಪ್ಪ, ಕುಮಾರ್, ಜಗಧೀಶ್, ರಾಮು, ಕೇಶವಯ್ಯ, ಬಸವರಾಜು ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net