

ಕಾರವಾರ: ವಿದ್ಯಾರ್ಥಿಗಳು ವಿಶಾಲ ಮನೋಭಾವವನ್ನು ಬೆಳೆಸಿಕೊಂಡು ಗುರು ಹಿರಿಯರು,ತಂದೆ,ತಾಯಂದಿರಿಗೆ ಗೌರವವನ್ನು ನೀಡಬೇಕು ಎಂದು ಕೋಸ್ಟ್ ಗಾರ್ಡ್ ಪಶ್ಚಿಮ ವಲಯ ಕಮಾಂಡೆಂಟ್ ಇನ್ಸ್ ಪೆಕ್ಟರ್ ಜನರಲ್ ಮನೋಜ ವಸಂತ ಬಾಡ್ಕರ್ ಹೇಳಿದರು.
ನಗರದ ದಿವೇಕರ್ ವಾಣಿಜ್ಯ ಕಾಲೇಜ್‌ನಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಅವಕಾಶ ಎಂಬ ಶೀರ್ಷಿಕೆಯಡಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಬಹುಮುಖ ಪ್ರತಿಭೆಗಳನ್ನು ಹೊಂದಿರಬೇಕು. ಶೈಕ್ಷಣಿಕವಾಗಿ ಮುಂದೆ ಬಂದು ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು.ದೇಶದ ಅಭ್ಯುದಯಕ್ಕೆ ಇಂದಿನ ಯುವ ಜನತೆಯ ಪಾತ್ರ ಬಹು ಮಹತ್ವದಾಗಿದೆ.
ಸಾಮಾಜಿಕ,ರಾಜಕೀಯ ಹಾಗೂ ಆರ್ಥಿಕ ಬೆಳವಣಿಗೆಗೆ ಪೂರಕವಾದ ಕೊಡುಗೆಗಳನ್ನು ನೀಡಿದಲ್ಲಿ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಇದನ್ನೂ ಓದಿ: ಅರಣ್ಯ ಸಿಬ್ಬಂದಿ ಎಂದರೆ ಹಸಿರು ಯೋಧರು
ಕಾರವಾರ ಠಾಣೆಯ ಕಮಾಂಡೆಂಟ್ ಸುರೇಶ ಕುರುಪ್, ಮಂಜುನಾಥ ವಿದ್ಯಾರ್ಥಿಗಳಿಗೆ ಉದ್ಯೋಗ ಮಾಹಿತಿ ನೀಡಿದರು. ಕಾಲೇಜ್‌ನ ಪ್ರಾಚಾರ್ಯ ಡಾ.ಕೇಶವ ಕೆ.ಜಿ.ಸ್ವಾಗತಿಸಿದರು.
ದಿವೇಕರ್ ಪಪೂ ಕಾಲೇಜ್ ಪ್ರಾಂಶುಪಾಲೆ ಲಲಿತಾ ಶೆಟ್ಟಿ ವಂದಿಸಿದರು. ಹರೀಶ ಕಾಮತ್ ನಿರೂಪಿಸಿದರು. ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಮ್ತಿಯಾಜ್ ಸಯ್ಯದ್, ಕಾರ್ಯದರ್ಶಿ ಅಜಯ ಸಾಹುಕಾರ್ ಇದ್ದರು.
ಯಾರು ಮನೋಜ ಬಾಡ್ಕರ್ ..? ತಿಳಿಯಲು ಇಲ್ಲಿ ಕ್ಲಿಕ್ ಮಾಡಿ : https://twitter.com/i/flow/login?redirect_after_login=%2Fmanojbaadkar