ಪೌರಕಾರ್ಮಿಕರನ್ನು ಗೌರವಿಸಿ

VV DIGITAL
Published on

ಲಕ್ಷ್ಮೇಶ್ವರ: ನಿತ್ಯ ಪಟ್ಟಣದ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರು ಹಬ್ಬ ಹರಿದಿನ ಎನ್ನದೆ ತಮ್ಮ ಕಾರ್ಯ ಮಾಡುತ್ತಿದ್ದಾರೆ. ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಕಾರ್ಯ ಮಾಡುವ ಪೌರಕಾರ್ಮಿಕರನ್ನು ಎಲ್ಲರೂ ಗೌರವದಿಂದ ಕಾಣಬೇಕು ಎಂದು ವರ್ತಕ ಗಂಗಾಧರಯ್ಯ ಪುರಾಣಿಕಮಠ ಹೇಳಿದರು.

ಪಟ್ಟಣದ ಪೇಟೆ ಹನುಮಂತದೇವರ ದೇವಸ್ಥಾನದ ಹತ್ತಿರವಿರುವ ತಮ್ಮ ಅಂಗಡಿಯಲ್ಲಿ ದೀಪಾವಳಿ ಪ್ರಯುಕ್ತ ಪಟ್ಟಣದ ಪುರಸಭೆ ಪೌರಕಾರ್ಮಿಕರನ್ನು ಕರೆಯಿಸಿ ಅವರಿಗೆ ಬಟ್ಟೆ ಉಡುಗೊರೆ ನೀಡಿ ಸನ್ಮಾನಿಸಿ ಮಾತನಾಡಿದರು.

ಪೌರಕಾರ್ಮಿಕರಿಗೂ ಕುಟುಂಬವಿದ್ದು, ಅವರು ಸಹ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವ ತವಕದಲ್ಲಿರುತ್ತಾರೆ. ಆದರೂ ಊರಿನ ಸ್ವಚ್ಛತೆಯ ಕಲ್ಪನೆಯ ಹಿನ್ನಲೆಯಲ್ಲಿ ಹಬ್ಬವನ್ನು ಸರಿಯಾಗಿ ಆಚರಿಸದೆ ತಮ್ಮ ಕಾರ್ಯದಲ್ಲಿ ತೊಡಗಿರುವುದು ಮೆಚ್ಚುವ ಸಂಗತಿಯಾಗಿದ್ದು, ಅವರ ಕಾರ್ಯಕ್ಕೆ ಪ್ರತಿಯೊಬ್ಬರು ಗೌರವ ನೀಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net