

ರೋಣ: ಸ್ನೇಹ ಸಮ್ಮಿಲನ ಬರೀ ಕಾರ್ಯಕ್ರಮವಲ್ಲ, ಮಕ್ಕಳ ಅಕ್ಷರಾಭ್ಯಾಸದ ಪ್ರಮುಖ ಹಂತ ಎಂದು ರೋಣ ಪುರಸಭೆ ಸದಸ್ಯ ಮಿಥುನ್ ಪಾಟೀಲ ಹೇಳಿದರು. ಗುರುವಾರ ಪಟ್ಟಣದ ಅಂಜುಮನ್ ಇಸ್ಲಾಮಿಕ್ ಕಮಿಟಿಯ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಪ್ರತಿಭೆ ಗೌರವಿಸುವ ಕೆಲಸವಾಗಬೇಕು. ಪಾಲಕರ ಪಾಲಿಗೆ ಇದು ಹೆಮ್ಮೆಯ ಕ್ಷಣವಾಗಿದೆ ಎಂದರು. ಸಂಸ್ಥೆಯ ಅಧ್ಯಕ್ಷ ಬಾವಾಸಾಬ್ ಬೆಟಗೇರಿ ಮಾತನಾಡಿ, ಮಕ್ಕಳ ಜವಾಬ್ದಾರಿ ಪಾಲಕರಿಗಿಂತ ಶಿಕ್ಷಕರ ಮೇಲೆ ಹೆಚ್ಚಾಗಿರುತ್ತದೆ. ಮಕ್ಕಳು ಶಿಕ್ಷಕರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ಉನ್ನತ ವ್ಯಾಸಂಗ ಮಾಡಿ ಕಲಿತ ಸಂಸ್ಥೆ ಹಾಗೂ ಹೆತ್ತವರಿಗೆ ಕೀರ್ತಿ ತರಬೇಕು ಎಂದರು. ಬೋರ್ಟ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕದ ಕಾರ್ಯದರ್ಶಿ ರಿಯಾಜ್ ಅಹ್ಮದ್ ಇಟಗಿ ಮಾತನಾಡಿದರು. ಕೃಷ್ಣೇಗೌಡ ಪಾಟೀಲ, ಗೀತಾ ಮಾಡಲಗೇರಿ, ಶಶಿಕಲಾ ಪಾಟೀಲ, ದುರ್ಗಪ್ಪ ಹಿರೇಮನಿ, ಅಹ್ಮದ್ ಇಟಗಿ, ಎ.ಐ. ಶೇಖ್, ಶಫೀಕ್ ಮೂಗನೂರ, ದಾವಲಸಾಬ್ ಬಾಡಿನಿ, ಅಂತೋನಿ ದಾಸ್, ಖಾಸಿಂಸಾಬ್ ದೋಟಿಹಾಳ, ಹುಸೇನ್‌ಸಾಬ್ ನದಾಫ್ ಎ.ಐ. ಇತರರಿದ್ದರು.