

ದೇವದುರ್ಗ: ಯುವ ಜನತೆ ಶಿಕ್ಷಣದ ಜತೆಗೆ ದೇಶ ಭಕ್ತಿ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಎನ್‌ಎಸ್‌ಎಸ್ ಶಿಬಿರ ವಿದ್ಯಾರ್ಥಿಗಳಲ್ಲಿ ಸಮಯ ಪ್ರಜ್ಞೆ, ಶಿಸ್ತು, ದೇಶಭಕ್ತಿ ಬೆಳೆಸುತ್ತದೆ ಎಂದು ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಹನುಮಂತ ಜಗ್ಲಿ ಹೇಳಿದರು.
ಪಟ್ಟಣದ ಶರಣಪ್ಪ ಮುರಿಗೆಪ್ಪ ಖೇಣೇದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಿಂದ ಆಯೋಜಿಸಿದ್ದ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. 76ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಯುವ ಜನತೆ ದೇಶ ಭಕ್ತಿ, ಮಣ್ಣಿನ ಬಗ್ಗೆ ಅಭಿಮಾನ, ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಮಾಡುವಂಥ ಕಾಳಜಿ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಎನ್‌ಎಸ್‌ಎಸ್ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಶಿಬಿರ ದೈಹಿಕ ಹಾಗೂ ಮಾನಸಿಕ ಸದೃಢತೆ ಒದಗಿಸುವ ಜತೆಗೆ ಶಿಸ್ತು, ಸಮಯ ಪಾಲನೆ ಬೋಧನೆ ಮಾಡಲಿದೆ ಎಂದು ಹನುಮಂತ ಜಗ್ಲಿ ತಿಳಿಸಿದರು.
ಅತಿಥಿ ಉಪನ್ಯಾಸಕರಾದ ಸಂಜೀವಕುಮಾರ್, ಮುನಿಯಪ್ಪ ನಾಗೋಲಿ, ನಲ್ಲಾರೆಡ್ಡಿ ಗಬ್ಬೂರು, ಶೈಲಜಾ ದಾಸನ್ಕೇರಿ, ಹನುಮಂತರಾಯ ಮಲ್ಲಾಪುರ್, ವೀರೇಶ್, ಮರಿಯಪ್ಪ ಅಲ್ಟಿ, ಖಾಜಾ ಮೋಹಿನುದ್ದೀನ್, ಶೇಕ್ ಉಸ್ಮಾನ್ ಗನಿ, ಮರಿಯಪ್ಪ ಇತರರಿದ್ದರು.