ಸಂಪನ್ಮೂಲ ಭೂಮಿಯನ್ನು ರೈತರಿಗೆ ನೀಡಿ

27-MSK-2 Sonathash hirredinni
ಸಂತೋಷ ಹಿರೇದಿನ್ನಿ
Published on

ಮಸ್ಕಿ: ರಾಜ್ಯ ಸರ್ಕಾರ ಖನಿಜ ಸಂಪನ್ಮೂಲ ಇರುವ ಸುಮಾರು 3677ಎಕರೆ ಭೂಮಿಯನ್ನು ಜಿಂದಾಲ್ ಕಂಪನಿಗೆ ಕಡಿಮೆ ಬೆಲೆಗೆ ನೀಡಿರುವುದು ಅಪರಾಧ ಎಂದು ಕರ್ನಾಟಕ ರೈತ ಸಂಘಟನೆಯ(ಎಐಕೆಕೆಎಸ್) ತಾಲೂಕು ಅಧ್ಯಕ್ಷ ಸಂತೋಷ ಹಿರೇದಿನ್ನಿ ಹೇಳಿದರು.

ಸೋಮವಾರ ಪತ್ರಿಕೆ ಹೇಳಿಕೆ ನೀಡಿದರು. ರಾಜ್ಯದಲ್ಲಿ ಲಕ್ಷಾಂತರ ರೈತರು ಸಾಗುವಳಿಗಾಗಿ ಭೂಮಿ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಕಂಪನಿಗೆ ನೀಡಿರುವ ಭೂಮಿಯನ್ನು ರೈತರಿಗೆ ಕೊಡಿ ಸರ್ಕಾರಕ್ಕೆ ಅದೇ ಹಣ ನೀಡುತ್ತಾರೆ.

ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ ಜಿಂದಾಲ ಕಂಪನಿಗೆ ಭೂಮಿ ನೀಡಲು ಮುಂದಾದಾಗ ವಿರೋಧಿಸಿದ್ದ ಕಾಂಗ್ರೆಸ್ ಈಗ ಭೂಮಿ ಮಾರಿರುವುದು ವಿಪರ್ಯಾಸ. ಕೂಡಲೇ ಇದನ್ನು ನಿಲ್ಲಿಸಿ ಇಲ್ಲದಿದ್ದರೆ ಕರ್ನಾಟಕ ರೈತ ಸಂಘ ಹಾಗೂ ಇತರ ಜನಪರ ಸಂಘಟನೆಗಳೊಡಗೂಡಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net