

ನರಗುಂದ: ಪಟ್ಟಣದಲ್ಲಿ ವೀರಸಿಂಧೂರ ಲಕ್ಷ್ಮಣ ವೃತ್ತ ನಿರ್ಮಾಣಕ್ಕೆ ಆಗ್ರಹಿಸುವ ಸಲುವಾಗಿ ಪಟ್ಟಣದ ಗಣಪತಿ ದೇವಸ್ಥಾನ ಆವರಣದಲ್ಲಿ ವಾಲ್ಮೀಕಿ ಸಮಾಜದ ಸದಸ್ಯರು ಗುರುವಾರ ಪೂರ್ವಭಾವಿ ಸಭೆ ನಡೆಸಿದರು. ಪಟ್ಟಣದ ಅಳಗವಾಡಿ ಕ್ರಾಸ್ ರಸ್ತೆ ಪಕ್ಕದಲ್ಲಿರುವ 25 ಚದರ ಮೀಟರ್ ವ್ಯಾಪ್ತಿಯಲ್ಲಿ ವೃತ್ತ ರಚಿಸಲು ನಿರ್ಣಯ ಕೈಗೊಂಡು ನೂತನ ವೃತ್ತ ಹಾಗೂ ಸಿಂಧೂರ ಲಕ್ಷ್ಮಣ ಮೂರ್ತಿ ನಿರ್ಮಾಣಕ್ಕೆ 1.15 ಲಕ್ಷ ರೂಪಾಯಿ ಹಣವನ್ನು ಗುತ್ತಿಗೆದಾರರಿಗೆ ನೀಡಲು ನಿರ್ಧರಿಸಲಾಯಿತು. ನಿವೃತ್ತ ಶಿಕ್ಷಕ ಎಚ್.ಎ. ಕಣವಿ, ಐ.ವೈ. ಮಣ್ಣೂರ, ಯಲ್ಲಪ್ಪ ನಾಯ್ಕರ, ವಿ.ಕೆ. ತಳವಾರ, ನಾಗಪ್ಪ ದೊಡಮನಿ, ಈರಪ್ಪ ತಳವಾರ, ಮಹೇಶ ತಳವಾರ, ಪ್ರಕಾಶ ಮೀಸಿ, ಹನುಮಂತ ರಾಮಣ್ಣವರ, ಆನಂದ ಮಲಸಮುದ್ರ, ಮಲ್ಲಪ್ಪ ಅಬ್ಬಿಗೇರಿ, ಶೇಖಪ್ಪ ಜಗದ, ಇತರರಿದ್ದರು.