ಅಡಹಳ್ಳಿ ಪಿಕೆಪಿಎಸ್ 9 ನಿರ್ದೇಶಕರ ರಾಜೀನಾಮೆ

3ATHANIGRAMIN4.jpg
Published on

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು 4 ದಿನ ಕಳೆಯುವುದರೊಳಗೆ ಉಪಾಧ್ಯಕ್ಷ ಸಮೇತ 10
ಜನ ನಿರ್ದೇಶಕರು ಗುರುವಾರ ರಾಜೀನಾಮೆ ನೀಡಿದ್ದಾರೆ.

ಅಡಹಳ್ಳಿ ಗ್ರಾಮದ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಸಮೇತ 10 ಜನ ನಿರ್ದೇಶಕರು ರಾಜೀನಾಮೆ ನೀಡುತ್ತಿರುವುದು. ಮಹಾದೇವ ಹಿಪ್ಪರಗಿ, ಪರಗೊಂಡ ತಾಂವಶಿ, ದಾನಪ್ಪ ಪಾಟೀಲ, ಅಣ್ಣಪ್ಪ ಪೂಜಾರಿ, ಬಸಪ್ಪ ಕೋಹಳ್ಳಿ ಇತರರಿದ್ದರು.
ಅಡಹಳ್ಳಿ ಗ್ರಾಮದ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಸಮೇತ 10 ಜನ ನಿರ್ದೇಶಕರು ರಾಜೀನಾಮೆ ನೀಡುತ್ತಿರುವುದು. ಮಹಾದೇವ ಹಿಪ್ಪರಗಿ, ಪರಗೊಂಡ ತಾಂವಶಿ, ದಾನಪ್ಪ ಪಾಟೀಲ, ಅಣ್ಣಪ್ಪ ಪೂಜಾರಿ, ಬಸಪ್ಪ ಕೋಹಳ್ಳಿ ಇತರರಿದ್ದರು.

ಜು.29 ರಂದು ಅಡಹಳ್ಳಿ ಪಿಕೆಪಿಎಸ್ ಅಧ್ಯಕ್ಷರಾಗಿ ಸುನೀಲ ಅಡಿವೆಪ್ಪ ಕೆಂಚಣ್ಣವರ, ಉಪಾಧ್ಯಕ್ಷರಾಗಿ ಮಹಾದೇವ ಶಿವಗೊಂಡ ಹಿಪ್ಪರಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಆದರೆ, ಗುರುವಾರ ಗ್ರಾಮದ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗ್ರಾಮದ ಬಹುತೇಕ ಹಿರಿಯರು ಗ್ರಾಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಈರಗೌಡ ಪಾಟೀಲ ಅವರನ್ನು ಅಧ್ಯಕ್ಷ ಗಾದೆಗೆ ಕೂಡ್ರಿಸಬೇಕೆಂದು ಬಯಸಿದ್ದರು. ಆದರೆ, ಅದಕ್ಕೆ ವಿರುದ್ಧವಾಗಿ ಗ್ರಾಪಂ ಸದಸ್ಯರನ್ನು ಪ್ರವಾಸಕ್ಕೆ ಕಳುಹಿಸಿದ್ದ ಅಡಹಳ್ಳಿ ಪಿಕೆಪಿಎಸ್ ಅಧ್ಯಕ್ಷ ಸುನೀಲ ಕೆಂಚಣ್ಣವರ, ಈರಗೌಡಗೆ ನೀವೇ ಅಧ್ಯಕ್ಷರೆಂದು ನಂಬಿಸಿ ಕೊನೆ ಗಳಿಗೆಯಲ್ಲಿ ಹಿರಿಯರ ಮಾತು ಧಿಕ್ಕರಿಸಿದ್ದಾರೆ ಎಂದು ಆರೋಪಿಸಿ ಪಿಕೆಪಿಎಸ್‌ನ 12 ಜನ ನಿರ್ದೇಶಕರಲ್ಲಿ 10 ಜನ ನಿರ್ದೇಶಕರು ತಮ್ಮ ಆರೋಗ್ಯ, ಕೌಟುಂಬಿಕ ಮತ್ತು ವೈಯಕ್ತಿಕ ನೆಪವೊಡ್ಡಿ ಸಂಘದ ಮುಖ್ಯಕಾರ್ಯನಿರ್ವಾಹಕ ನಾರಾಯಣ ಪೂಜಾರಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. 15 ದಿನಗಳಲ್ಲಿ ರಾಜೀನಾಮೆ ವಾಪಸ್ ಪಡೆಯದಿದ್ದರೆ ಪಿಕೆಪಿಎಸ್ ಸೂಪರ್‌ಸೀಡ್ ಆಗುವ ಸಾಧ್ಯತೆಗಳಿವೆ.

ರಾಜೀನಾಮೆ ನೀಡಿದವರು: ಉಪಾಧ್ಯಕ್ಷ ಮಹಾದೇವ ಹಿಪ್ಪರಗಿ, ನಿರ್ದೇಶಕರಾದ ಪರಗೊಂಡ ತಾಂವಶಿ, ದಾನಪ್ಪ ಪಾಟೀಲ, ಅಣ್ಣಪ್ಪ ಪೂಜಾರಿ, ಬಸಪ್ಪ ಕೋಹಳ್ಳಿ,
ಚಂದ್ರಕಲಾ ಮಠಪತಿ, ತಂಗೆವ್ವ ಶೇಗಾಂವಿ, ಜಯವಂತ ನಾಟಿಕಾರ, ಅಣ್ಣಪ್ಪ ಸನದಿ, ಅನಿಲ ಪಾಟೀಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net