ಭರವಸೆ ಈಡೇರಿಸದಿದ್ದರೆ ರಾಜೀನಾಮೆ

CTD 27 PRESS MEET-03
Published on

ಚಿತ್ರದುರ್ಗ: ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಮೂರು ವರ್ಷದೊಳಗೆ ಕೊಟ್ಟ ಭರವಸೆಗಳನ್ನು ಈಡೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ್ದನಿದ್ದೇನೆ ಎಂದು ಆಮ್ ಆದ್ಮಿ ಪಕ್ಷದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಇ.ಜಗದೀಶ್ ಹೇಳಿದರು.

ಸಮಾಜದಲ್ಲಿ ದಿಟ್ಟ ಬದಲಾವಣೆಗೆ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಮುಖ್ಯ. ಈ ನಿಟ್ಟಿನಲ್ಲಿ ಹೊಸದಿಲ್ಲಿ ಮಾದರಿಯಲ್ಲಿ ಎಲ್‌ಕೆಜಿಯಿಂದ ಪ.ಪೂರ್ವದ ವರೆಗೆ ಉಚಿತ ಶಿಕ್ಷಣ ನೀಬೇಕು ಎಂಬುದು ಪಕ್ಷದ ಕನಸು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿ ಪಡಿಸಿ ಸಾಮಾನ್ಯರ ಮನೆ ಬಾಗಿಲಿಗೆ ಚಿಕಿತ್ಸಾ ಸೌಲಭ್ಯ ಒದಗಿಸಲಾಗುವುದು. ಈ ಎಲ್ಲ ವಿಷಯಗಳನ್ನು ಸಂಗ್ರಹಿಸಿ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕಾರ್ಯದರ್ಶಿ ಕೆಂಚಪ್ಪ ಮಾತನಾಡಿ, ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿವೆ. ಭ್ರಷ್ಟರಹಿತ ಆಡಳಿತ ನಮ್ಮ ಗುರಿ ಎಂದರು.

ಎಂ.ರಾಮಪ್ಪ, ಪ್ರೊ.ಕುಬೇಂದ್ರ ನಾಯಕ್, ರಾಜಣ್ಣ, ತಿಮ್ಮಾರೆಡ್ಡಿ, ಪ್ರಹ್ಲಾದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net