ಆತಂಕದಲ್ಲಿ ರಾಯನಾಳ ಕೆರೆ ಪಕ್ಕದ ನಿವಾಸಿಗಳು

New Rayanal
Published on

ಹುಬ್ಬಳ್ಳಿ : ಇಲ್ಲಿನ ಗೋಕುಲ ರಸ್ತೆ ಲೋಹಿಯಾನಗರದ ರಾಯನಾಳ ಕೆರೆಯಲ್ಲಿ ಚರಂಡಿ ನೀರು ಸೇರಿದ್ದು, ವಿಷಜಂತುಗಳ ತಾಣವಾಗಿದೆ.

ಸತತ ಮಳೆಯಿಂದಾಗಿ ಕೆರೆ ತುಂಬಿದ್ದು, ನೀರು ಪಕ್ಕದ ರಸ್ತೆಗೆ ಬಂದಿದೆ. ಇದರೊಂದಿಗೆ ರಸ್ತೆ ಪಕ್ಕದ ಚರಂಡಿ ಒಡೆದಿದ್ದು, ಅದರಲ್ಲಿನ ಗಲೀಜು ನೀರು ಸಹ ಕೆರೆ ಸೇರಿಕೊಂಡಿದೆ. ರಸ್ತೆ ಮೇಲೆ ಕೆರೆಯ ನೀರಿನೊಂದಿಗೆ ಚರಂಡಿ ನೀರೂ ಹರಿಯುತ್ತಿದೆ.

ಕೆರೆ ನೀರಿಗೆ ಚರಂಡಿ ನೀರು ಸೇರಿದ್ದರಿಂದ ಸುತ್ತಲಿನ ವಾತಾವರಣದಲ್ಲಿ ದುರ್ನಾತ ತುಂಬಿದೆ. ಕೆರೆ ಪಕ್ಕದ ರಸ್ತೆ ಹಂದಿಗಳ ತಾಣವಾಗಿದೆ. ಕೆರೆ ದಂಡೆಗೆ ಇರುವ ಈ ರಸ್ತೆಗೆ ಹೊಂದಿಕೊಂಡು ನೂರಾರು ಮನೆಗಳು ಇವೆ. ಕೆರೆಯಲ್ಲಿನ ಹಾವು, ಏಡಿಗಳು ರಸ್ತೆ ಮೇಲೆ ಹರಿದಾಡುತ್ತಿವೆ. ಅನೇಕ ಬಾರಿ ಹಾವು, ಚೇಳುಗಳು ಮನೆಗೂ ಬಂದಿವೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಇಲ್ಲಿನ ನಿವಾಸಿಗಳು.

ನಿತ್ಯ ನೂರಾರು ಮಕ್ಕಳು ಇದೇ ರಸ್ತೆಯಿಂದ ಶಾಲೆಗೆ ಹೋಗುತ್ತಾರೆ.

ಈ ಸಮಸ್ಯೆ ಕುರಿತು ಸ್ಥಳೀಯ ನಿವಾಸಿಗಳು ಜನಪ್ರತಿನಿಧಿಗಳು ಹಾಗೂ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಅಳಲು ಇಲ್ಲಿನ ನಿವಾಸಿಗಳದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net