ಕೆಸರುಗದ್ದೆಯಾದ ನರೇಗಲ್ಲ ರಸ್ತೆಗಳು

04 NRL-1
ನರೇಗಲ್ಲ ಪಟ್ಟಣದ 7ನೇ ವಾರ್ಡ್‌ನಲ್ಲಿ ಕೆಸರುಗದ್ದೆಯಾದ ರಸ್ತೆ.
Published on

ನರೇಗಲ್ಲ: ಪಟ್ಟಣದ 7ನೇ ವಾರ್ಡಿನ ನವನಗರ ಹತ್ತಿರದ ರಸ್ತೆ ಸಂಪೂರ್ಣ ಹದಗಟ್ಟಿದ್ದು, ಭಾರಿ ಮಳೆ ಬಂದರೆ ರಸ್ತೆಗಳು ಕೊಚ್ಚಿಕೊಂಡುವ ಹೋಗುವ ಸಾಧ್ಯತೆಗಳು ಹೆಚ್ಚಾಗಿದೆ. ಕಳೆದ ಕೆಲವು ದಿನಗಳಿಂದ ಜಿಟಿ ಜಿಟಿ ಮಳೆಯಿಂದ ಸಂಪೂರ್ಣವಾಗಿ ಒಳ ರಸ್ತೆಗಳು ಹಾಳಾಗಿವೆ. ರಸ್ತೆಯುದ್ದಕ್ಕೂ ತಗ್ಗು-ಗುಂಡಿಗಳಿವೆ. ಗುಂಡಿಯಲ್ಲಿ ಮಳೆ ನೀರು ನಿಂತು ಬೃಹತ್ ಹೊಂಡ ನಿರ್ಮಾಣವಾಗಿದೆ. ವಾಹನ ಸಂಚಾರವಿರಲಿ ಜನರು ನಡೆದಾಡುವುದೇ ದುಸ್ತರವಾಗಿದೆ.

ಸಣ್ಣ ಮಳೆಯಿಂದ ರಸ್ತೆಗಳು ಕೆಸರುಗದ್ದೆಯಾಗಿ ಮಾರ್ಪಟ್ಟಿವೆ. ಪಾದಚಾರಿಗಳಿಗೆ ನಡೆದುಕೊಂಡು ಹೋಗಲು ಸಮಸ್ಯೆಯಾಗಿದೆ. ವಾಹನ ಸವಾರರಂತೂ ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ಚಲಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಕೆಸರಾಗಿದ್ದರಿಂದ ಪಾದಚಾರಿಗಳು, ವಾಹನ ಸವಾರರು ಸುಗಮ ಸಂಚಾರಕ್ಕೆ ಪರಿತಪ್ಪಿಸುವಂತಾಗಿದೆ. ಜನತೆ ರಾಡಿಯಾದ ರಸ್ತೆಯಲ್ಲಿ ತಿರುಗಾಡುತ್ತಾ ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಶಾಪ ಹಾಕುತ್ತಿದ್ದಾರೆ. ಕೆಸರುಗದ್ದೆಯಾದ ರಸ್ತೆಯಲ್ಲಿ ಸ್ವಲ್ಪ ಆಯತಪ್ಪಿದರೂ ರಾಡಿ ಸ್ನಾನ ಗ್ಯಾರಂಟಿ. ಪಪಂಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ವಿದ್ಯಾರ್ಥಿಗಳು ಶಾಲೆಗೆ ಹೊಗಲು ಹರಸಾಹಸ ಪಡುವಂತಾಗಿದೆ. ನೀರು ಸರಾಗವಾಗಿ ಸಾಗಲು ಯಾವುದೇ ವ್ಯವಸ್ಥೆ ಮಾಡಿಲ್ಲ. ಮಳೆಯಾದರೆ ರಸ್ತೆಯ ತುಂಬ ನೀರು ನಿಂತು ಹೊಂಡಗಳಾಗುತ್ತವೆ. ಎಷ್ಟೊ ಬಾರಿ ಪಪಂ ಅಧಿಕಾರಿಗಳ ಗಮನಕ್ಕೆ ಹಾಗೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ವಾರ್ಡ್ ನಿವಾಸಿ ನಾಗನಗೌಡ ನಾಡಗೌಡ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net