

ನಾಪೋಕು: ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಮೂರ್ನಾಡು ಜ್ಞಾನ ಜ್ಯೋತಿ ಶಾಲೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅಂಬೇಡ್ಕರ್ ವಸತಿ ಶಾಲೆಯ ಪ್ರೌಢಶಾಲೆ ಬಾಲಕರ ವಿಭಾಗದಲ್ಲಿ ಕಬಡ್ಡಿ ಮತ್ತು ಖೋ -ಖೋ ಪ್ರಥಮ ಸ್ಥಾನ, ಬಾಲಕಿಯರ ವಿಭಾಗದಲ್ಲಿ ಖೋ -ಖೋ ದ್ವಿತೀಯ ಸ್ಥಾನ, ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಖೋ-ಖೋ ಪ್ರಥಮ ಸ್ಥಾನ ಪಡೆದಿದ್ದಾರೆ.
ಅಥೆಟಿಕ್ಸ್ ಬಾಲಕರ ವಿಭಾಗದಲ್ಲಿ ವಚನ್ 400 ಮೀ. ಓಟ ಪ್ರಥಮ, ವಿ.ಕೆ.ವಿಕಾಸ್ 1500 ಮೀ. ಓಟ ಪ್ರಥಮ, ಪಿ.ಯು.ಲಿತೇಶ್ 1500 ಮೀ. ಓಟ ದ್ವಿತೀಯ, ಉದ್ದ ಜಿಗಿತ ಮತ್ತು ತ್ರಿವಿಧ ಜಿಗಿತದಲ್ಲಿ ಕೆ.ಎಂ.ಖುಶಿ ಪ್ರಥಮ, 4400 ಮೀ. ರಿಲೇ ಬಾಲಕರ ತಂಡ ಪ್ರಥಮ ಮತ್ತು 4100 ಮೀ.ರಿಲೇ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದಿದೆ.
ಇನ್ನು ಪ್ರೌಢಶಾಲಾ ಅಥ್ಲೆಟಿಕ್ಸ್ ಬಾಲಕಿಯರ ವಿಭಾಗದಲ್ಲಿ ಪ್ರೀತಿಕಾ 800 ಮೀ. ದ್ವಿತೀಯ ಸ್ಥಾನ , ಪ್ರಾಥಮಿಕ ವಿಭಾಗದಲ್ಲಿ ಉದ್ದ ಜಿಗಿತ ಗಾನವಿ ದ್ವಿತೀಯ, 600ಮೀ. ಓಟದಲ್ಲಿ ರಚಿತಾ ತೃತೀಯ ಸ್ಥಾನ ಪಡೆದಿದ್ದಾರೆ.