ವಸತಿ ಶಾಲೆಯ ವಿದ್ಯಾರ್ಥಿ ಅನುಮಾನಾಸ್ಪದ ಸಾವು

1
ಕುಟುಂಬಸ್ಥರೊಂದಿಗೆ ಆಸ್ಪತ್ರೆ ಎದುರು ಮಾತನಾಡುತ್ತಿರುವ ಡಿಸಿ ಶುಭಕಲ್ಯಾಣ್​, ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್​ ಮಂಜುನಾಥ್​, ಸರ್ಕಲ್​ ಇನ್​ಸ್ಪೆಕ್ಟರ್​ ಅನಿಲ್​ ಕುಮಾರ್​, ಬಿಇಒ ನಟರಾಜ್​ ಇದ್ದರು.
Published on

ಶಾಲಾ ಕೊಠಡಿಯಲ್ಲೇ ರಕ್ತಕಾರಿಕೊಂಡ ಬಾಲಕ - ವಸತಿ ಶಾಲೆ ಸಿಬ್ಬಂದಿ ವಿರುದ್ಧ ಪಾಲಕರ ಆಕ್ರೋಶ

ಕೊರಟಗೆರೆ : ತಾಲೂಕು ಬಜ್ಜನಹಳ್ಳಿ ಏಕಲವ್ಯ ವಸತಿ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿ ಶಕುನಿತಿಮ್ಮನಹಳ್ಳಿಯ ರಮೇಶ್​ ಎಂಬುವವರ ಪುತ್ರ ಅಭಿಲಾಷ್​(14) ಅಸ್ವಸ್ಥಗೊಂಡು ಶಾಲೆಯಲ್ಲಿಯೇ ಮೃತಪಟ್ಟಿದ್ದಾನೆ.

ಹಬ್ಬಕ್ಕೆ ಮನೆಗೆ ಬಂದಿದ್ದ ಅಭಿಲಾಷ್​ನನ್ನು ವಿದ್ಯಾರ್ಥಿಯ ತಾಯಿ ಸೋಮವಾರ ಬೆಳಗ್ಗೆ 8 ಗಂಟೆಗೆ ವಸತಿ ಶಾಲೆಗೆ ಬಿಟ್ಟಿದ್ದರು. ಬೆಳಗ್ಗೆ ಪಾಠ ಕೇಳಿದ್ದ ವಿದ್ಯಾರ್ಥಿ ಮಧ್ಯಾಹ್ನದ ಬಳಿಕ ಅಸ್ವಸ್ಥಗೊಂಡು ತರಗತಿಯಲ್ಲಿಯೇ ಮಲಗಿದ್ದಾನೆ. ಕೆಲವು ಸಮಯದ ಬಳಿಕ ಸ್ನೇಹಿತರು ಕೇಳಿದಾಗಲೂ ಮಾತನಾಡಿದ್ದ ಅಭಿಲಾಷ್​ ಕೆಲವೇ ನಿಮಿಷದಲ್ಲಿ ಬಾಯಿ ಹಾಗೂ ಮೂಗಿನಲ್ಲಿ ರಕ್ತಕಾರಿಕೊಂಡು ಮೃತಪಟ್ಟಿದ್ದಾನೆ.

ಇದನ್ನು ಗಮನಿಸಿದ ಸಹಪಾಠಿಗಳು ಕೂಡಲೇ ಆತನನ್ನು ಎತ್ತಿಕೊಂಡು ವಸತಿ ನಿಲಯದ ಶುಶ್ರೂಷಕಿ ಕೊಠಡಿಗೆ ಕರೆತಂದಿದ್ದಾರೆ, ಪರೀಸಿದ ನರ್ಸ್​ ಅಭಿಲಾಷ್​ ಮೃತಪಟ್ಟಿರುವುದು ಖಚಿತಪಡಿಸಿ, ತಾಲೂಕು ಆಸ್ಪತ್ರೆಗೆ ಮೃತದೇಹ ಸಾಗಿಸಿ ಕೈತೊಳೆದುಕೊಂಡಿದ್ದಾರೆ. ಕೊರಟಗೆರೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಸತಿ ಶಾಲೆಯ ಪ್ರಾಚಾರ್ಯ ವಿನೋದ್​ ಯಾದವ್​ ಹಾಗೂ ವಾರ್ಡನ್​ ಮಂಜುನಾಥ್​ ರ್ನಿಲಕ್ಷ್ಯ ವಿದ್ಯಾರ್ಥಿ ಸಾವಿಗೆ ಕಾರಣ ಎಂದು ಪಾಲಕರು ದೂರಿದ್ದಾರೆ. ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಕರ್ತವ್ಯ ರ್ನಿಲಕ್ಷ$್ಯ ವಹಿಸಿದ ವಿನೋದ್​ ಯಾದವ್​ ಹಾಗೂ ಮಂಜುನಾಥ್​

ವಿರುದ್ಧ ಕ್ರಮಕ್ಕೆ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತ್ಯಾಗರಾಜ್​ಗೆ ಸೂಚಿಸಿದರು. ನಂತರ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಮಾತನಾಡಿ ನ್ಯಾಯ ದೊರಕಿಸುವುದಾಗಿ ಭರವಸೆ ನೀಡಿದರು.

ನ್ಯಾಯಕ್ಕಾಗಿ ಕುಟುಂಬದ ಹೋರಾಟ

ಮಗುವಿನ ಸಾವಿನ ಬಗ್ಗೆ ಪಾಲಕರು ಅನುಮಾನ ವ್ಯಕ್ತಪಡಿಸಿದ್ದು, ವಸತಿ ಶಾಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕೊರಟಗೆರೆ

ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ವಿದ್ಯಾರ್ಥಿಯ ಶವವನ್ನು ಸಾಗಿಸಲಾಗಿದ್ದು,ಸಾವಿಗೆ ನಿಖರ ಕಾರಣ ತಿಳಿಸುವಂತೆ ಒತ್ತಾಯಿಸಿ ಕುಟುಂಬಸ್ಥರು ಆಸ್ಪತ್ರೆಯ ಮುಂದೆ ಪ್ರತಿಭಟಿಸಿದರು. ವಸತಿ ಶಾಲೆಯ

ವಾರ್ಡನ್​ ಮತ್ತು ಪ್ರಾಂಶುಪಾಲರ ರ್ನಿಲಕ್ಷ$್ಯದಿಂದ ನಮ್ಮ ಮಗು ಮೃತಪಟ್ಟಿದ್ದು, ನ್ಯಾಯ ದೊರಕುವವರೆಗೆ ನಾವು ಯಾವುದೇ ಕಾರಣಕ್ಕೂ ಮರಣೋತ್ತರ ಪರೀೆ ಮಾಡಿಸುವುದಿಲ್ಲ ಮತ್ತು ಶವ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ನಾಲ್ಕು ದಿನದಿಂದ ಪ್ರಾಚಾರ್ಯ ಗೈರು!

ವಸತಿ ಶಾಲೆಯ ವಿನೋದ್​ ಯಾದವ್​ ಹಾಗೂ ವಾರ್ಡನ್​ ಮಂಜುನಾಥ್​ ನಾಲ್ಕು ದಿನದಿಂದ ಶಾಲೆಗೆ ಹಾಜರಾಗದೆ ಗೈರಾಗಿದ್ದರು ಎನ್ನಲಾಗಿದೆ. ರಜೆ ಕೂಡ ಪಡೆಯದೆ ಅನಧಿಕೃತವಾಗಿ ಗೈರಾಗಿದ್ದರಿಂದ ಬೇರೊಬ್ಬರಿಗೆ ಕರ್ತವ್ಯದ ಹೊಣೆ ಕೂಡ ನೀಡದ ಹಿನ್ನೆಲೆಯಲ್ಲಿ ಅಪಡ ಸಂಭವಿಸಿದಾಗ ಯಾರೊಬ್ಬರೂ ಜವಾಬ್ದಾರಿ ತೆಗೆದುಕೊಳ್ಳಲು ಮುಂದೆ ಬಂದಿಲ್ಲ ಎನ್ನಲಾಗಿದೆ. ಶಾಲೆಯಲ್ಲಿ 29 ಜನ ಶಿಕ್ಷಕರಿದ್ದು, ಎಲ್ಲರೂ ಹೊರರಾಜ್ಯದವಾರಗಿದ್ದು, ಯಾರೊಬ್ಬರಿಗೂ ಕನ್ನಡ ಭಾಷೆ ಬಗ್ಗೆ ತಿಳಿದಿಲ್ಲ. ಹಾಗಾಗಿ, ಸಕಾಲದಲ್ಲಿ ವಿದ್ಯಾರ್ಥಿ ಸಮಸ್ಯೆ ಆಲಿಸಲು ಯಾರೊಬ್ಬರಿಗೂ ಸಾಧ್ಯವಾಗಿಲ್ಲ.

ವಿದ್ಯಾರ್ಥಿ ಸಾವು ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿ ವರದಿ ಪಡೆದಿದ್ದೇನೆ. ಕರ್ತವ್ಯಲೋಪದ ಹಿನ್ನೆಲೆಯಲ್ಲಿ ವಸತಿ ಶಾಲೆಯ ಪ್ರಾಚಾರ್ಯ ಹಾಗೂ ವಾರ್ಡನ್​ ಅಮಾನತುಗೊಳಿಸಲು ಸೂಚಿಸಿದ್ದೇನೆ. ಪ್ರಕರಣ ಬಗ್ಗೆ ಸಂಪೂರ್ಣ ವರದಿ ಪಡೆದ ನಂತರ ಸಾವಿನ ಕಾರಣ ತಿಳಿಯಲಿದೆ. - ಶುಭಕಲ್ಯಾಣ್​ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net