35 ಕೋಟಿ ರೂ.ವೆಚ್ಚದಲ್ಲಿ ವಸತಿ ಶಾಲೆ ನಿಮಾರ್ಣ

14_09_2025_BGR_RURAL_PAGE_3
ಸೂಲಿಬೆಲೆ ಹೋಬಳಿ ಕಂಬಳೀಪುರ ಗ್ರಾಪಂ ವ್ಯಾಪ್ತಿಯಲ್ಲಿನ ಮುತ್ತುಕದಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಇ&ಖಾತಾ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಶಾಸಕ ಶರತ್​ ಬಚ್ಚೇಗೌಡ, ಬಮೂಲ್​ ನಿರ್ದೇಶಕ ಬಿ.ವಿ.ಸತೀಶಗೌಡ, ಗ್ರಾಪಂ ಅಧ್ಯಕ್ಷೆ ಮಲ್ಲಿಕಾ ಅವೀನ್​, ಗ್ರಾಪಂ ಮಾಜಿ ಸದಸ್ಯ ಮುತ್ತಕದಹಳ್ಳಿ ಬಾಬು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ಎಸ್​.ಮಂಜುನಾಥ್​ ಇದ್ದರು.
Published on

ಸೂಲಿಬೆಲೆ : ಕಂಬಳೀಪುರ ಗ್ರಾಪಂ ವ್ಯಾಪ್ತಿಯ ಬೇಗೂರು ಗ್ರಾಮದಲ್ಲಿ ಕಾರ್ಮಿಕ ಇಲಾಖೆಯಿಂದ ಸುಮಾರು 35 ಕೋಟಿ ರೂ.ವೆಚ್ಚದಲ್ಲಿ ವಸತಿ ಶಾಲೆ ನಿಮಾರ್ಣವಾಗಲಿದೆ ಎಂದು ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು. ಸೂಲಿಬೆಲೆ ಹೋಬಳಿ ಕಂಬಳೀಪುರ ಗ್ರಾಪಂ ವ್ಯಾಪ್ತಿಯ ಮುತ್ತುಕದಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಇ&-ಖಾತಾ ವಿತರಣೆ ಹಾಗೂ ನಾನಾ ಸವಲತ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣಕ್ಕೆ ಎಲ್ಲರೂ ಅಗ್ರಗಣ್ಯ ಸ್ಥಾನ ನೀಡಬೇಕು. ಈ ನಿಟ್ಟಿನಲ್ಲಿ ಬೇಗೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಇನ್ಪೋಷಿಯಸ್​ಯಿಂದ ದತ್ತು ಪಡೆದು ಸುಮಾರು 1.50 ಕೋಟಿ ರೂ.ವೆಚ್ಚದಲ್ಲಿ ಉನ್ನತಿಕರಣವಾಗಲಿದೆ ಎಂದರು.

ಕಂಬಳೀಪುರ ಗ್ರಾಪಂ ವ್ಯಾಪ್ತಿಯ ಪ್ರತಿ ಹಳ್ಳಿಯ ಜನತೆಗೆ ತಮ್ಮ ಆಸ್ತಿಯ ಹಕ್ಕು ನೀಡುವ ಕೆಲಸವಾಗುತ್ತಿದೆ. ಪ್ರತಿಯೊಬ್ಬರಿಗೂ ಅಸ್ತಿಯ ಹಕ್ಕು ಈ-ಖಾತಾ ಮೂಲಕ ನೀಡಲಾಗುತ್ತಿದ್ದು, ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಸೂಲಿಬೆಲೆ ಹೋಬಳಿ ಮತ್ತು ನಂದುಗುಡಿ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 20 ಕೆರೆಗಳಿಗೆ ನೀರು ತುಂಬಿಸುವ ಕನಸು ಶೀಘ್ರದಲ್ಲಿ ನನಸಾಗಲಿದೆ. ಇದರಿಂದ ಅಂತರ್ಜಲ ವೃದ್ಧಿಯಾಗಿ ರೈತರ ಬದುಕು ಹಸನಾಗಲಿದೆ ಎಂದರು.

ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಬಿ.ಎನ್​.ಗೋಪಾಲಗೌಡ ಮಾತನಾಡಿ, ಶಾಸಕರು ಶಿಕ್ಷಣ ಕ್ಷೇತ್ರದ ಬಗ್ಗೆ ಇಟ್ಟಿರುವ ಕಾಳಜಿ ಅಪಾರವಾಗಿದೆ. ಅವರ ಪ್ರಯತ್ನದಿಂದ ಕಾರ್ಮಿಕ ಇಲಾಖೆವತಿಯಿಂದ ವಸತಿ ಶಾಲೆ ನಿಮಾರ್ಣವಾಗಲಿದ್ದು ಗ್ರಾಮೀಣ ಭಾಗದ ಮಕ್ಕಳಿಗೆ ಉಪಯೋಗವಾಗಲಿದೆ ಎಂದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಅನುದಾನದಲ್ಲಿ ಕುಕ್ಕರ್​ ಮತ್ತು ನೀರಿನ ಬಾಟಲಿಗಳ ವಿತರಿಸಲಾಯಿತು. ತಾಪಂ ಮಾಜಿ ಸದಸ್ಯ ನಗರೇನಹಳ್ಳಿ ನಾಗರಾಜಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಮುತ್ಸಂದ್ರ ಆನಂದಪ್ಪ, ಸಹಕಾರ ಬ್ಯಾಂಕ್​ ಉಪಾಧ್ಯಕ್ಷ ಗುಳ್ಳಹಳ್ಳಿ ಮುನಿಯಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net