

ಚಿಕ್ಕಮಗಳೂರು: ಬಡವರಿಗೆ ನೀಡಿದ ನಿವೇಶನಗಳಲ್ಲಿ ಬಲಾಢ್ಯರು ಅಕ್ರಮವಾಗಿ ಮನೆಕಟ್ಟಿ ಬೀಗ ಹಾಕಿಕೊಂಡಿದ್ದಾರೆ. ಅರ್ಹ ಫಲಾನುಭವಿಗಳಿಗೆ ಬಿಟ್ಟುಕೊಡಲು ಒಂದು ವಾರ ಗಡುವು ನೀಡಲಾಗಿದೆ. ಒಂದು ವೇಳೇ ಬಿಟ್ಟುಕೊಡದಿದ್ದಲ್ಲಿ ನಗರಸಭೆಯಿಂದಲೇ ಮನೆಗಳನ್ನು ಕಾನೂನು ಚೌಕಟ್ಟಿನಡಿ ಅರ್ಹರಿಗೆ ಹಸ್ತಾಂತರಿಸಲಾಗುವುದು ಎಂದು ಪೌರಾಯುಕ್ತ ಬಿ.ಸಿ.ಬಸವರಾಜ್ ತಿಳಿಸಿದರು.
ಸಾರ್ವಜನಿಕ ದೂರಿನನ್ವಯ ಆಶ್ರಯ ಸಮಿತಿ ಅಧ್ಯಕ್ಷ, ಸದಸ್ಯರು ಹಾಗೂ ನಗರಸಭೆ ಅಧಿಕಾರಿಗಳ ತಂಡ ನಗರ ಹೊರವಲಯದ ಇಂದಿರಾ ಗಾಂಧಿ ಆಶ್ರಯ ಬಡಾವಣೆಯಲ್ಲಿ ಬುಧವಾರ ಪರಿಶೀಲಿಸಿ ಮಾತನಾಡಿದರು.
ನಗರಸಭೆಯಿಂದ ಹಕ್ಕುಪತ್ರ ನೀಡಿರುವ ಫಲಾನುಭವಿಗಳೇ ಬೇರೆ. ಮನೆ ನಿರ್ವಿುಸಿಕೊಂಡವರೇ ಬೇರೆ. ಮನೆ ನಿರ್ವಿುಸಿಕೊಂಡವರಿಗೆ ತೆರವುಗೊಳಿಸುವಂತೆ ಎರಡು ದಿನದ ಹಿಂದೆಯೇ ಆಶ್ರಯ ಸಮಿತಿ ಅಧ್ಯಕ್ಷರು ಸೂಚಿಸಿದ್ದರೂ ಯಾರೂ ಸ್ಪಂದಿಸಿಲ್ಲ. ಒಂದು ವಾರದಲ್ಲಿ ಮನೆಬೀಗ ತೆಗೆದು ಅರ್ಹ ಫಲಾನುಭವಿಗಳಿಗೆ ಬಿಟ್ಟುಕೊಡದಿದ್ದಲ್ಲಿ ನಗರಸಭೆಯಿಂದಲೇ ತೆರವು ಮಾಡಿಸಿ, ಈ ಹಿಂದೆ ಹಕ್ಕುಪತ್ರ ನೀಡಿದ ಅರ್ಹರಿಗೆ ಹಸ್ತಾಂತರಿಸಲಾಗುವುದು. ನಗರಸಭೆಯಿಂದ ಅನುಮತಿ ಪಡೆಯದೆ ದೌರ್ಜನ್ಯದಿಂದ ಮನೆಕಟ್ಟಲು ಮುಂದಾದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಬಡಾವಣೆಯಲ್ಲಿ 707 ನಿವೇಶನಗಳಿವೆ. ಶೇ.35ರಷ್ಟು ಮನೆ ನಿರ್ವಣವಾಗಿವೆ. ಉಳಿದಂತೆ ನಿವೇಶನಗಳಿವೆ. ಈ ಪೈಕಿ 300ಕ್ಕೂ ಹೆಚ್ಚು ನಿವೇಶನಗಳಲ್ಲಿ ಉಳ್ಳವರು ಅನಧಿಕೃತವಾಗಿ ಮನೆ ನಿರ್ವಿುಸಿಕೊಂಡಿದ್ದಾರೆ. ಕಳೆದ ಎರಡು ವರ್ಷದಲ್ಲಿ ಇವುಗಳನ್ನು ನಿರ್ವಿುಸಲಾಗಿದೆ. ಎಲ್ಲವನ್ನೂ ಪರಿಶೀಲಿಸಿ ಕ್ರಮ ಕೈಗೊಳ್ಳಲು ಅಧ್ಯಕ್ಷರು, ಅಧಿಕಾರಿಗಳಿಗೆ ತಿಳಿಸಲಾಗಿದೆ. ಮೂರು ದಿನಗಳಲ್ಲಿ ಅರ್ಹರು ಮತ್ತು ಅಕ್ರಮವಾಗಿ ಮನೆ ನಿರ್ವಿುಸಿಕೊಂಡವರ ಮಾಹಿತಿ ಪಡೆದು ಸಮಸ್ಯೆ ಇತ್ಯರ್ಥಗೊಳಿಸಲಾಗುವುದು ಎಂದರು.
ಇಂದಿನಿಂದಲೇ ತೆರವು: ಇಂದಿರಾ ಗಾಂಧಿ ಬಡಾವಣೆಯಲ್ಲಿ ಕೆಲವರು ಕೆರೆ ಅಂಗಳ, ರಸ್ತೆ, ಪಾರ್ಕ್ ಜಾಗದಲ್ಲಿ ಫೌಂಡೇಷನ್ ನಿರ್ವಿುಸಿದ್ದಾರೆ. ಇನ್ನೂ ಕೆಲವರು ಮನೆ ಕಟ್ಟಿಕೊಂಡಿದ್ದಾರೆ. ಅಂತಹ ಮನೆಗಳನ್ನು ಜು.23ರಿಂದಲೇ ತೆರವುಗೊಳಿಸಲಾಗುವುದು. ಬಡಾವಣೆ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವರು 30 ಲಕ್ಷ ರೂ. ಬಿಡುಗಡೆ ಮಾಡಿದ್ದು, ನಗರಸಭೆ 5 ಲಕ್ಷ ರೂ. ಅನುದಾನ ಸೇರಿ ಟೆಂಡರ್ ಕರೆಯಲಾಗಿದೆ. ಮಳೆ ಕಡಿಮೆಯಾದ ಕೂಡಲೇ ರಸ್ತೆ, ಚರಂಡಿ ನಿರ್ವಣ, ಬೀದಿದೀಪ ಸೇರಿ ಮೂಲ ಸೌಕರ್ಯ ಕಲ್ಪಿಸುವ ಕೆಲಸ ಆರಂಭಿಸಲಾಗುವುದು ಎಂದು ಪೌರಾಯುಕ್ತ ಬಿ.ಸಿ.ಬಸವರಾಜ್ ತಿಳಿಸಿದರು.
ತೆರವಿಗೆ ಕೂಡಲೇ ಕ್ರಮ: ಬಡಾವಣೆಯಲ್ಲಿ ಹಲವರು ಅನಧಿಕೃತವಾಗಿ ಮನೆ ನಿರ್ವಿುಸಿಕೊಂಡಿದ್ದಾರೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಸಚಿವ ಸಿ.ಟಿ.ರವಿ ಅವರ ಸಲಹೆಯಂತೆ ಅರ್ಹರಿಗೆ ಮನೆ ಹಸ್ತಾಂತರಿಸಲು ಹತ್ತಾರು ಬಾರಿ ಪರಿಶೀಲನೆ ನಡೆಸಲಾಗಿತ್ತು ಎಂದು ನಗರ ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣ್ ತಿಳಿಸಿದರು. ಅಕ್ರಮ ಖಾತ್ರಿಯಾದ ನಂತರ ನಗರಸಭೆ ಅಧಿಕಾರಿ, ಸಿಬ್ಬಂದಿಯೊಂದಿಗೆ ಸಮಿತಿ ಸದಸ್ಯರು ಭೇಟಿ ನೀಡಿದ್ದೇವೆ. ಬಡವರಿಗೆ ನೀಡಿರುವ ನಿವೇಶನದಲ್ಲಿ ಶ್ರೀಮಂತರು ಮನೆ ಕಟ್ಟಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ಕೂಡಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಆಶ್ರಯ ಸಮಿತಿ ಸದಸ್ಯರಾದ ಜೇಮ್್ಸ, ರಾಜೇಶ್, ಕಂದಾಯಾಧಿಕಾರಿ ಬಸವರಾಜು, ಇಂಜಿನಿಯರ್ ರಶ್ಮಿ, ಚಂದನ್, ರಕ್ಷಿತ್ ಗೌಡ, ಸಿಬ್ಬಂದಿ ಜಗದಿಶ್, ಅಣ್ಣಯ್ಯ, ವಿವೇಕ್, ಸುನೀಲ್ ಇತರರು ಹಾಜರಿದ್ದರು.