ರೇಷ್ಮಾ ಹಳೆಮನಿಗೆ ‘ಯಳವತ್ತಿ’ ಅಧಿಕಾರ

Yalavatti
Published on

ಲಕ್ಷ್ಮೇಶ್ವರ: ತಾಲೂಕಿನ ಯಳವತ್ತಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ರೇಷ್ಮಾ ರಸೂಲಸಾಬ ಹಳೆಮನಿ ಮತ್ತು ಉಪಾಧ್ಯಕ್ಷರಾಗಿ ಬಸವಣ್ಣೆಪ್ಪ ಚಿಣಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಬಿ.ಎನ್ ಗಾಯಕವಾಡ ಕಾರ್ಯನಿರ್ವಹಿಸಿದರು.

ಒಟ್ಟು 12 ಸದಸ್ಯರನ್ನು ಹೊಂದಿರುವ ಗ್ರಾಪಂಗೆ ಅಧ್ಯಕ್ಷ ಸ್ಥಾನ ಅ ವರ್ಗದ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಎಸ್‌ಸಿಗೆ ಮೀಸಲಾಗಿತ್ತು. ಗುರುವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ರೇಣವ್ವ ಲಕ್ಷ್ಮೇಶ್ವರ ಮತ್ತು ರೇಷ್ಮಾ ಹಳೆಮನಿ ನಾಮಪತ್ರ ಸಲ್ಲಿಸಿದ್ದರು. ಒಂದು ಮತ ಅಸಿಂಧುವಾಗಿದ್ದರಿಂದ ರೇಷ್ಮಾ ಹಳೆಮನಿ ಒಂದು ಮತ ಅಂತರದಲ್ಲಿ ಗೆದ್ದರು.

ಉಪಾಧ್ಯಕ್ಷ ಸ್ಥಾನಕ್ಕೆ ಬಸವಣ್ಣೆಪ್ಪ ಚಿಣಗಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾದರು. ಗ್ರಾಪಂ ಸದಸ್ಯರಾದ ಈರನಗೌಡ ಬಾಗೇವಾಡಿ, ಚನ್ನಬಸಗೌಡ ಕಟ್ಟಿ, ಗುಂಡಪ್ಪ ಪೂಜಾರ, ಸೋಮನಗೌಡ ನಿಂಗನಗೌಡರ, ಶಿವಯೋಗಿ ಹೊಸಕೇರಿ, ಗಿರಿಜವ್ವ ಮೆಣಸಿಗಿಮಠ, ದಿಲ್‌ಶಾದಬೇಗಂ ಅಗಸಿಮನಿ, ಗಂಗವ್ವ ರಾಮಗೇರಿ, ಹುಲೆಗೆವ್ವ ಭಜಂತ್ರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net