ಮಂಗಳೂರಿನ ರೆಶೆಲ್ ಬ್ರೆಟ್ನಿ ಫೆರ್ನಾಂಡಿಸ್ ಅವರ 'ಭಾರತ್ @ 2047- ರೋಲ್ ಆಫ್ ಯೂತ್’ ಕೃತಿ ಬಿಡುಗಡೆ

IMG-20240801-WA0152
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ಯುವ ಲೇಖಕಿ, ವಾಗ್ಮಿ ರೆಶೆಲ್ ಬ್ರೆಟ್ನಿ ಫೆರ್ನಾಂಡಿಸ್ ಅವರ ಎರಡನೇ ಆಂಗ್ಲ ಪುಸ್ತಕ ‘ಭಾರತ್ @ 2047- ರೋಲ್ ಆ್ ಯೂತ್’ ಈ ಬಾರಿಯ ಸ್ವಾತಂತ್ರ್ಯೋತ್ಸವ ಸಂದರ್ಭ ಬಿಡುಗಡೆಯಾಗುತ್ತಿದೆ.
ಭಾರತ (ಭಾರತ) ಸ್ವಾತಂತ್ರ್ಯದ 100 ನೇ ವರ್ಷದತ್ತ ಹೆಜ್ಜೆ ಹಾಕುತ್ತಿರುವ ಈ ಸಂದರ್ಭದಲ್ಲಿ ಸದೃಢ ಭಾರತ ನಿರ್ಮಾಣದಲ್ಲಿ ಯುವಜನರ ಸಕ್ರಿಯ ಪಾತ್ರ ಹೇಗೆ ಇರಬೇಕು? ಎನ್ನುವ ಕುರಿತು ಇದೆ.
ಈ ಪುಸ್ತಕವು 36 ವರ್ಷ ಕಾಲ ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ ತನ್ನ ಅಜ್ಜ ಸಾರ್ಜೆಂಟ್ ಅಲೆಕ್ಸ್ ಮೋನಿಸ್ ಮೂಡುಬಿದಿರೆ  ಅವರಿಗೆ ಸಮರ್ಪಿಸಿರುವುದಾಗಿ ರೆಶೆಲ್ ಬ್ರೆಟ್ನಿ ತಿಳಿಸಿದ್ದಾರೆ.
ಲೇಖಕಿ ಬ್ರೆಟ್ನಿ ಫೆರ್ನಾಂಡಿಸ್ ಅವರು ಪ್ರಸ್ತುತ ಮಂಗಳೂರು ಎಸ್‌ಡಿಎಂ ಕಾನೂನು ಕಾಲೇಜು ವಿದ್ಯಾರ್ಥಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net