

ಮುನವಳ್ಳಿ: ಮಲಪ್ರಭಾ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದು, ಅಣೆಕಟ್ಟೆ ಗೇಟ್ ಪರಿಶೀಲಿಸಿ ಸುರಕ್ಷತೆ ಕುರಿತು ನಿಗಾ ವಹಿಸಬೇಕು ಎಂದು ಒತ್ತಾಯಿಸಿ ಕಳಸಾ ಬಂಡೂರಿ ನಾಲಾ ಮಲಪ್ರಭಾ ನದಿ ಜೋಡಣಾ ಹೋರಾಟ ಸಮಿತಿಯಿಂದ ನೀರಾವರಿ ಇಲಾಖೆಯ ಎಸ್‌ಇ ಡಾ.ಮಧುಕರ ವಿ.ಎಸ್ ಅವರಿಗೆ ಶನಿವಾರ ನವಿಲುತೀರ್ಥ ಡ್ಯಾಮ್‌ನಲ್ಲಿ ಮನವಿ ಸಲ್ಲಿಸಲಾಯಿತು.
ಈ ಬಾರಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗದಂತೆ ಜಾಣ್ಮೆಯಿಂದ ನೀರಿನ ನಿರ್ವಹಣೆ ಮಾಡಿದ ಅಭಿಯಂತರಾದ ಡಾ.ಮಧುಕರ ವಿ.ಎಸ್., ವಿವೇಕ ಮುದಿಗೌಡ್ರ, ಕೆ.ಬಿ.ಸಜ್ಜನಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಈಗಾಗಲೇ ತಜ್ಞರ ಸಮಿತಿ ಭೇಟಿ ನೀಡಿ ಗೇಟ್‌ಗಳು ಸುರಕ್ಷಿತವಾಗಿವೆ ಎಂದು ವರದಿ ನೀಡಿದ್ದು, ಈ ಕುರಿತು ಯಾವುದೆ ಸಂದೇಹ ಬೇಡ ಎಂದು ಅಭಿಯಂತರು ವಿಶ್ವಾಸ ವ್ಯಕ್ತಪಡಿಸಿದರು.
ರೈತ ಮುಖಂಡರಾದ ಅಂಬರೀಷ ಯಲಿಗಾರ, ನಿಂಗನಗೌಡ ಮಲಗೌಡ್ರ, ಜಿಲ್ಲಾ ಸಂಚಾಲಕ ಶಿವಾನಂದ ಮೇಟಿ, ಬಾಳಪ್ಪ ರಡ್ರಟ್ಟಿ, ಪ್ರಕಾಶ ಕಾಮಣ್ಣವರ, ಮಹಾಂತೇಶ ಕುರಬಗಟ್ಟಿ, ನಾಗಪ್ಪ ಕಾಮಣ್ಣವರ, ಈರಣ್ಣ ಬಸಳಿಗುಂದಿ, ರಾಜು ಘಟವಾಳಿಮಠ, ಹನುಮಂತ ಹಡಪದ, ಪ್ರಶಾಂತ ಉಜ್ಜಿನಕೊಪ್ಪ, ನಿಂಗಪ್ಪ ಹವಾಲ್ದಾರ, ರವಿ ಹುರಳಿ, ಮನೋಹರ ನಾಯ್ಕ ಇತರರು ಇದ್ದರು.