ಮೀಸಲು ಪ್ರಮಾಣ ಕಡಿತ ಕ್ರಮಕ್ಕೆ ವಿರೋಧ

banjara, protest,
Published on

ಚನ್ನಗಿರಿ: ಮೀಸಲು, ಒಳಮೀಸಲು ಪ್ರಮಾಣ ಕಡಿತ ವಿರೋಧಿಸಿ ಬೀಡುಗೊಂಡನಹಳ್ಳಿ ದೊಡ್ಡ ತಾಂಡದ ಬಂಜಾರ ಸಮುದಾಯ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿ ವಿದಾನಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದರು.

ಮುಖಂಡ ಪಿ.ಮಂಜುನಾಥ್ ಮಾತನಾಡಿ, ಶೇ.15ರಷ್ಟಿದ್ದ ಮೀಸಲನ್ನು ಕಡಿತ ಮಡಲು ಹೊರಟಿರುವುದು ಸರಿಯಲ್ಲ . ಈ ಸಂಬಂಧ ರಾಜ್ಯ ಸರ್ಕಾರವು ಕೇಂದ್ರಕ್ಕೆ ಮಾಡಿದ ಶಿಫಾರಸು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಸರ್ಕಾರ ಸ್ಪಂದಿಸದಿದ್ದರೆ ಮತದಾನ ಬಹಿಷ್ಕರಿಸುವ ಜತೆಗೆ ಯಾವುದೇ ರಾಜಕೀಯ ಪಕ್ಷಗಳ ಮುಖಂಡರಿಗೆ ಗ್ರಾಮದೊಳಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ದೊಡ್ಡ ತಾಂಡದಲ್ಲಿ 325ಕ್ಕೂ ಅಧಿಕ ಕುಟುಂಬಗಳು ಕೃಷಿ ನಂಬಿ ಬದುಕುತ್ತಿವೆ. 765 ಮತದಾರರಿದ್ದಾರೆ. ಸ್ವಾತಂತ್ರ್ಯ ಬಂದಂದಿನಿಂದಲೂ ಸಮುದಾಯದ ಜನರು ಕೂಲಿ ಮಾಡಿ ಬದುಕುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಮೀಸಲು ಬಳಸಿ ಶಿಕ್ಷಣ ಪಡೆದು ಪ್ರಗತಿ ಹೊಂದುವ ಸಂದರ್ಭದಲ್ಲಿ ಸರ್ಕಾರ ಮೀಸಲು ಕಡಿತಕ್ಕೆ ಮುಂದಾಗಿರುವುದು ಸರಿಯಲ್ಲ. ಈ ಸಂಬಂಧ ಮಾರ್ಚ್ 30ರಂದು ಚನ್ನಗಿರಿಯಲ್ಲಿ ಬಂಜಾರ ಸಮುದಾಯ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದರು.

ಮುಖಂಡರಾದ ಮಾಲತೇಶ್‌ನಾಯ್ಕ, ಶಿವನಾಯ್ಕ, ವೀರೇಂದ್ರನಾಯ್ಕ, ಬಿ.ಎಲ್. ಮಂಜುನಾಥ್, ಸುರೇಶ್ ನಾಯ್ಕ, ಯಶವಂತ್, ಅವಿನಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net