

ಕಡೂರು: ತಾಲೂಕಿನ ಪಿ.ಕೋಡಿಹಳ್ಳಿ ಗ್ರಾಮದಲ್ಲಿ ಶ್ರೀರೇಣುಕಾ ಎಲ್ಲಮ್ಮ ದೇವಿ ನೂತನ ದೇವಾಲಯದ ಪ್ರಾರಂಭೋತ್ಸವದ ಅಂಗವಾಗಿ ಪಟ್ಟಣದಲ್ಲಿನ ವಕ್ಕಲುಗಳ ಭಕ್ತರಿಂದ ಬುಧವಾರ ಮೀಸಲುಗೂಡೆ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು.
ಪಟ್ಟಣದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದಿಂದ ನೂರಾರು ಮಹಿಳೆಯರು ಮೀಸಲುಗೂಡೆ ಮೆರವಣಿಗೆ ಆರಂಭಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ರಾಮದೇವರ ಗುಡಿಬೀದಿಯ ಶ್ರೀ ರಾಯದುರ್ಗದ ರೇಣುಕಾಂಬ ದೇವಾಲಯದವರೆಗೆ ಮೆರವಣಿಗೆ ಸಾಗಿತು. ನಂತರ ಪಿ.ಕೋಡಿಹಳ್ಳಿ ಗ್ರಾಮಕ್ಕೆ ತೆರಳಿದರು.
ಗೊರವಯ್ಯಗಳಾದ ಲೋಕೇಶಪ್, ಹುಚ್ಚಪ್ಪ, ದೇವಾಲಯ ಗುಡಕಟ್ಟಿನ ಸಮಿತಿ ಗೌಡರಾದ ಕೆ.ವಿ.ಮಲ್ಲೇಶಪ್ಪ, ಪೂಜಾರ್ ಕುಮಾರಪ್ಪ, ಕೆ.ಲೋಕೇಶ್ವರ್, ಅಶ್ವಿನಿ ರವಿ, ನಲ್ಲೂರಿ ಸುರೇಶ್, ದುಶ್ಯಂತ ಕುಮಾರ್, ರಮೇರ್, ಪೇಟೆ ಕುಮಾರ್ ಮತ್ತಿತರಿದ್ದರು.