ನಿವೃತ್ತಿ ಜೀವನ ಸಮಾಜಸೇವೆಗೆ ಮೀಸಲು

4 RPT 2
ರಿಪ್ಪನ್‌ಪೇಟೆಯಲ್ಲಿ ಗ್ರಾಪಂನಿಂದ ನಿವೃತ್ತ ಯೋಧ ಸುಬೇದಾರ್ ಮುಕುಂದ ಮತ್ತು ಕುಟುಂಬವನ್ನು ಸನ್ಮಾನಿಸಲಾಯಿತು. ಧನಲಕ್ಷ್ಮೀ, ಸುಧೀಂದ್ರ ಪೂಜಾರಿ, ನರೇಂದ್ರ ಕುಮಾರ್, ಪ್ರವೀಣ್ ಇತರರಿದ್ದರು.
Published on

ರಿಪ್ಪನ್‌ಪೇಟೆ: ಭಾರತೀಯ ಸೇನೆಯಲ್ಲಿ 28 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತನಾಗಿದ್ದು ದೇಶಸೇವೆ ನನಗೆ ಲಭಿಸಿದ ಸದಾವಕಾಶ. ನಿವೃತ್ತಿಯ ನಂತರದ ಜೀವನವನ್ನು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ನಿವೃತ್ತ ಸುಬೇದಾರ್ ಮುಕುಂದ ಹೇಳಿದರು.

ಸೇನೆಯಿಂದ ನಿವೃತ್ತರಾದ ಬಳಿಕ ಮೊದಲ ಬಾರಿಗೆ ತವರಿಗೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರಿಂದ ಆತ್ಮೀಯ ಸ್ವಾಗತ ಮತ್ತು ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿಯೇ ದೇಶಸೇವೆ ಮಾಡಬೇಕೆಂಬ ಹಂಬಲವಿತ್ತು. ಅದರಂತೆ ಪ್ರಯತ್ನ ಲಿಸಿ ಸೈನ್ಯದಲ್ಲಿ ಸೇವೆಸಲ್ಲಿಸುವ ಭಾಗ್ಯ ಲಭಿಸಿತು. ಹೈದಾರಬಾದ್‌ನಲ್ಲಿ ತರಬೇತಿ ಮುಗಿಸಿ, ಡೆಹರಾಡೂನ್, ಗುಜರಾತ್. ಜಮ್ಮು-ಕಾಶ್ಮೀರ, ಸಿಯಾಚಿನ್ ಮುಂತಾದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ನಮ್ಮ ರಾಷ್ಟ್ರದ ವೈಶಿಷ್ಟೃತೆಯಂತೆ ಬೇರೆ ಬೇರೆ ಹವಾಮಾನ, ಆಹಾರ ಪದ್ಧತಿ, ವಿವಿಧ ಆಚಾರ-ವಿಚಾರಗಳು ನನಗೆ ಬಹಳಷ್ಟು ಅನುಭವದ ಪಾಠವನ್ನು ಹೇಳಿಕೊಟ್ಟಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ರಾಷ್ಟ್ರ ನಮ್ಮದೆನ್ನಲು ಹೆಮ್ಮೆ ಎನಿಸುತ್ತದೆ ಎಂದರು.
ಯುವಕರು ತಮ್ಮ ಜೀವನದ ಒಂದಷ್ಟು ಕಾಲವನ್ನು ಸೇನೆ ಇತರ ರಾಷ್ಟ್ರ ರಕ್ಷಣೆಯ ಸೇವೆಯಲ್ಲಿ ತೊಡಗಿಕೊಳ್ಳಬೇಕೆಂಬುದು ನನ್ನ ಸಲಹೆ. ಗ್ರಾಪಂ, ಜುಮ್ಮಾ ಮಸೀದಿ, ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿರುವುದು ಜೀವನದಲ್ಲಿ ಮರೆಯಲಾರದ ಕ್ಷಣ. ಈ ಮಣ್ಣಿನ ಸೇವೆಗೆ ಸದಾ ಸಿದ್ಧನಿರುವೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಧನಲಕ್ಷ್ಮೀ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ತಾಪಂ ಇಒ ನರೇಂದ್ರ ಕುಮಾರ್, ಪಿಎಸ್‌ಐ ಪ್ರವೀಣ್, ಪಿಡಿಒ ಮಧುಸೂದನ, ಸದಸ್ಯರಾದ ಆಸ್ೀ, ಪ್ರಕಾಶ ಪಾಲೇಕರ್, ಗಣಪತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net