ಷೇರುದಾರರಿಗೆ ಶೇ. 25 ಡಿವಿಡೆಂಡ್ ವಿತರಣೆ

CTD MECHENT BANK----6
Published on

ಚಿತ್ರದುರ್ಗ: ಭಾರತೀಯ ರಿಸರ್ವ್ ಬ್ಯಾಂಕ್ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಸಾಲ ವಿತರಣೆಗೆ ತೊಡಕಾಗುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷ ಎಸ್.ಆರ್. ಲಕ್ಷ್ಮೀಕಾಂತ್‌ರೆಡ್ಡಿ ಹೇಳಿದರು.

ನಗರದ ಎಸ್‌ಜಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಬ್ಯಾಂಕ್‌ನ 74ನೇ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿ, ಆರ್‌ಬಿಐ ಕ್ರಮಗಳಿಂದ ಬ್ಯಾಂಕ್ ವರಮಾನದ ಮೇಲೂ ನೇರ ಪರಿಣಾಮ ಉಂಟು ಮಾಡಿದೆ. ಆದರೂ 2024-25ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕ್ 4.91 ಕೋಟಿ ರೂ. ಲಾಭಗಳಿಸಿದೆ. ಷೇರುದಾರರಿಗೆ ಶೇ.25 ಲಾಭಾಂಶ ವಿತರಿಸಲಾಗುವುದು ಎಂದು ತಿಳಿಸಿದರು.

ಡಿವಿಡೆಂಡ್ ವಿತರಣೆ ನಂತರ 5,796 ಸದಸ್ಯರ 1.47 ಕೋಟಿ ರೂ.ಷೇರು ಬಂಡವಾಳದೊಂದಿಗೆ ಸ್ವಂತ ಬಂಡವಾಳ 46.59 ಕೋಟಿ ರೂ.ಗಳಾಗಲಿದೆ. ಕಳೆದ ಮಾರ್ಚ್ 31 ಕ್ಕೆ 189.30 ಕೋಟಿ ರೂ.ಠೇವಣಿ ಇದೆ. ಬ್ಯಾಂಕ್‌ನ ಎನ್‌ಪಿಎ ಶೂನ್ಯ ಪ್ರಮಾಣದಲ್ಲಿದೆ ಎಂದರು.

ಇದೇ ವೇಳೆ ಅಮೃತ ಮಹೋತ್ಸವ ಸ್ಮರಣಾರ್ಥ ಕಟ್ಟಡ ನಿರ್ಮಾಣಕ್ಕೆ ಸಭೆಯಲ್ಲಿ ಸಲಹೆ ಕೇಳಿ ಬಂತು.

ಬ್ಯಾಂಕ್ ಉಪಾಧ್ಯಕ್ಷ ಎಲ್.ಇ. ಶ್ರೀನಿವಾಸ್‌ಬಾಬು, ನಿರ್ದೇಶಕರಾದ ರಘುರಾಮರೆಡ್ಡಿ, ಪಿ. ಸುರೇಶ್‌ರಾಜು, ಶ. ಮಂಜುನಾಥ, ವ್ಯವಸ್ಥಾಪಕಿ ವಾಣಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ಮಲ್ಲಿಕಾರ್ಜುನ ಇತರರು ಇದ್ದರು.

ಬ್ಯಾಂಕಿನ 25 ಹಿರಿಯ ಸದಸ್ಯರು, ಷೇರುದಾರರು ಹಾಗೂ ಬ್ಯಾಂಕ್ ಸಿಬ್ಬಂದಿ ವರ್ಗದವರ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ಪ್ರತಿಭಾವಂತ ಮಕ್ಕಳನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net