ಮೀಸಲಾತಿವಾರು ಕೌನ್ಸೆಲಿಂಗ್ ಇಂದು

meeting
Published on

ಕಲಘಟಗಿ: ತಾಲೂಕಿನ ದಾಸ್ತಿಕೊಪ್ಪ ಆದರ್ಶ ವಿದ್ಯಾಲಯ ಶಾಲೆಯಲ್ಲಿ 6 ನೇ ತರಗತಿ ದಾಖಲಾತಿಗೆ ಮೂರನೇ ಸುತ್ತಿನ ನಂತರ ಖಾಲಿ ಇರುವ 17 ಸೀಟುಗಳಿಗೆ ಆ. 31ರಂದು ಬೆಳಗ್ಗೆ 10 ಗಂಟೆಗೆ ಮೀಸಲಾತಿವಾರು ಕೌನ್ಸೆಲಿಂಗ್ ನಡೆಯಲಿದೆ. ಕೌನ್ಸೆಲಿಂಗ್​ಗೆ ಅರ್ಹ ಮಕ್ಕಳ ಪಟ್ಟಿಯನ್ನು 1-10 ಅನುಪಾತದಲ್ಲಿ ಬಿಇಒ ಕಚೇರಿ ಮತ್ತು ಆದರ್ಶ ವಿದ್ಯಾಲಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಹೆಸರಿರುವ ಪಾಲಕರು ಆ. 31ರಂದು ಬೆಳಗ್ಗೆ 10 ಗಂಟೆಗೆ ಹಾಜರಿರಬೇಕು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net