

ಕಕಮರಿ: 2ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದ ಪಂಚಮಸಾಲಿ ಸಮುದಾಯದವರ ಮೇಲೆ ಲಾಠಿಚಾರ್ಚ್ ಕ್ರಮ ಖಂಡಿಸಿ ಸಮುದಾಯದವರು ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಮುಖಂಡ ಶ್ರೀಶೈಲ ಜನಗೌಡ ಮಾತನಾಡಿ, ಹೋರಾಟ ಹತ್ತಿಕ್ಕಲು ಯತ್ನಿಸಿದ ಸರ್ಕಾರಕ್ಕೆ ಮುಂಬರುವ ದಿನಗಳಲ್ಲಿ ತಕ್ಕಪಾಠ ಕಲಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಥಣಿ ಉಪತಹಸೀಲ್ದಾರ್ ಎಂ.ಎಸ್.ಯತ್ನಟ್ಟಿ ಸ್ಥಳಕ್ಕಾಗಮಿಸಿ ಪ್ರತಿಭಟನಾ ನಿರತರ ಮನವಿ ಸ್ವೀಕರಿಸಿ ಪ್ರತಿಭಟನೆ ಮೊಟಕುಗೊಳಿಸುವಂತೆ ಮನವೊಲಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.
ಗ್ರಾಮ ಆಡಳಿತಾಧಿಕಾರಿ ಎಸ್.ಜಿ.ರಾಠೋಡ, ಮುಖಂಡರಾದ ವೆಂಕನಗೌಡ ಪಾಟೀಲ, ಸಿದರಾಯ ಸಿಂಧೂರ, ಕಲ್ಲಪ್ಪ ತಂಗಡಿ, ಈರಪ್ಪ ತಂಗಡಿ, ರಾಮಣ್ಣ ಆಜೂರ, ಅಶೋಕ ಶಿರಗುಪ್ಪಿ, ಈರಣ್ಣ ಹೊನವಾಡ, ಸಂಗಮೇಶ ಪುಠಾಣಿ, ಮಲ್ಲಿಕಾರ್ಜುನ ಶೇಡ್ಯಾಳ, ಸಿದ್ದಪ್ಪ ಬಿಳೂರ, ಶಿವಾನಂದ ಜನಗೌಡ, ಹರಳೇಶ ಜನಗೌಡ, ರವಿ ಬಿಳ್ಳೂರ, ಶಿವಾನಂದ ಮೈಗೂರ,
ಮಲ್ಲು ತಂಗಡಿ, ರಮೇಶ ಮೈಗೂರ, ಭೀಮು ಜನಗೌಡ, ಮಾನಿಂಗ ಕನಮಡಿ ಇತರರಿದ್ದರು.