ಮೀಸಲಾತಿ ನಿಗದಿ ಇಂದಿನಿಂದ

Gramayana Logo
Published on

ಗದಗ: ಜಿಲ್ಲೆಯ 7 ತಾಲೂಕುಗಳ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ಸಮ್ಮುಖದಲ್ಲಿ ಮೊದಲನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ನಿಗದಿಪಡಿಸಲು ಸಭೆ ಆಯೋಜಿಸಲಾಗಿದೆ.

ಜ. 24ರಂದು ಬೆಳಗ್ಗೆ 11 ಗಂಟೆಗೆ ಶಿರಹಟ್ಟಿಯ ಡಿ. ದೇವರಾಜ ಅರಸು ಸಭಾಭವನ ಹಾಗೂ ಅದೇ ದಿನ ಮಧ್ಯಾಹ್ನ 3 ಗಂಟೆಗೆ ಲಕ್ಷೆ್ಮೕಶ್ವರದ ಶ್ರೀ ಜಗದ್ಗುರು ವೀರಗಂಗಾಧರ ರಂಭಾಪುರಿ ಸಮುದಾಯ ಭವನದಲ್ಲಿ ಸಭೆ ನಡೆಯಲಿದೆ.

ಜ. 25ರಂದು ಬೆಳಗ್ಗೆ 11.30ಕ್ಕೆ ಗದಗ ನಗರದ ತೋಂಟದಾರ್ಯ ಕಲ್ಯಾಣ ಮಂಟಪ ಹಾಗೂ ಅದೇ ದಿನ ಸಂಜೆ 4ಕ್ಕೆ ಮುಂಡರಗಿಯ ಶ್ರೀ ಜಗದ್ಗುರು ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಸಭೆ ಏರ್ಪಡಿಸಲಾಗಿದೆ.

ಜ. 27ರಂದು ಬೆಳಗ್ಗೆ 9 ಗಂಟೆಗೆ ನರಗುಂದದ ಶ್ರೀ ಆರೂಢ ಜ್ಯೋತಿ ಭವನ ಹಾಗೂ ಮಧ್ಯಾಹ್ನ 12 ಗಂಟೆಗೆ ರೋಣದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪ ಮತ್ತು ಸಂಜೆ 4 ಗಂಟೆಗೆ ಗಜೇಂದ್ರಗಡದ ಶ್ರೀ ಸಿದ್ಧಲಿಂಗೇಶ್ವರ ಚಿತ್ರಮಂದಿರದಲ್ಲಿ ಸಭೆ ಏರ್ಪಡಿಸಲಾಗಿದೆ.

ಈ ಕುರಿತು ಎಲ್ಲ ಗ್ರಾಪಂ ಸದಸ್ಯರಿಗೆ ತಿಳಿವಳಿಕೆ ಪತ್ರ ನೀಡಲಾಗಿದೆ. ತಿಳಿವಳಿಕೆ ಪತ್ರ ತಲುಪದೇ ಇದ್ದಲ್ಲಿ ಈ ಪ್ರಕಟಣೆಯನ್ನೇ ತಿಳಿವಳಿಕೆ ಪತ್ರವೆಂದು ಭಾವಿಸಿ ಸಭೆಗೆ ಹಾಜರಾಗಬೇಕು. ಸಭೆಗೆ ಹಾಜರಾಗುವಾಗ ಆಯ್ಕೆಯಾದ ಪ್ರಮಾಣ ಪತ್ರದ ನಕಲು ಪ್ರತಿಯನ್ನು ಹಾಜರುಪಡಿಸಬೇಕು ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net