ಬಡ್ತಿ ಮೀಸಲು ಕೊಡದ ಸರ್ಕಾರದ ವಿರುದ್ಧ ದಾವೆ

123661603_2065060810295770_6193882571579958986_n
Published on

ಚಿತ್ರದುರ್ಗ: ಅಂಗವಿಕಲರ ಸರ್ಕಾರಿ ನೌಕರರಿಗೆ ಸೇವಾ ಜೇಷ್ಠತೆ ಆಧರಿಸಿ ಶೇ.3 ಬಡ್ತಿ ಮೀಸಲು ಕೊಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶ ಅನು ಷ್ಠಾನಗೊಳಿಸದ ರಾಜ್ಯಸರ್ಕಾರ ನಡೆ ವಿರುದ್ಧ ಶೀಘ್ರದಲ್ಲೇ ದಾವೆ ಹೂಡುವುದಾಗಿ ರಾಜ್ಯ ಅಂಗವಿಕಲ ನೌಕರರ ಸಂಘದ ಅಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಡ್ತಿ ಮೀಸಲು ಆದೇಶ ಜಾರಿಯಾಗಿ 10 ತಿಂಗಳಾದರೂ ರಾಜ್ಯಸರಕಾರ ಕಡೆಗಣಿಸಿ ದೆ. ಈ ವಿಷಯದ ಕುರಿತಂತೆ ಅನೇಕ ಸಚಿವರು,ಮುಖ್ಯಕಾರ‌್ಯದರ್ಶಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.ಈಗಾಗಲೇ ಅನೇಕ ಇಲಾಖೆಗಳಲ್ಲಿ ಬಡ್ತಿ ಕೊಡಲಾಗಿದ್ದು,ಇನ್ನೂ ಕೆಲವು ಇಲಾಖೆಗಳಲ್ಲಿ ಬಡ್ತಿಗೆ ಸಿದ್ಧತೆ ನಡೆದಿದ್ದು, ಬಡ್ತಿ ಸೌಲಭ್ಯದಿಂದ ಅಂಗವಿಕಲ ನೌಕರರನ್ನು ವಂಚಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯವಿವಿಧ ಇಲಾಖೆಗಳಲ್ಲಿ 25 ಸಾವಿರಕ್ಕೂ ಅಧಿಕ ಅಂಗವಿಕಲ ನೌಕರರು ಇದ್ದಾರೆ ಎಂದರು. ಸಂಘದ ನಿರ್ದೇಶಕ ಕಾಶಿನಾಥ ಶಿರಿಗೇರಿ,ಜಿಲ್ಲಾಧ್ಯಕ್ಷ ವೈಟಿ.ಶಿವಕುಮಾರ, ಗಿರೀಶ,ವಿಶ್ವನಾಥಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net